ವಿಜಯಪುರ: ನಗರದ ಸಂಚಾರಿ ಪೊಲೀಸ ಠಾಣಾ ಹೆಲ್ಪ್ ಲೈನ್ ನಂಬರನ್ನು ಎಸ್ಪಿ ಋಷಿಕೇಶ್ ಸೋನವಾಣೆ ಬಿಡುಗಡೆಗೊಳಿಸಿದರು. ಸಂಚಾರಿ ಪೊಲೀಸ ಠಾಣೆಗೆ ಸಂಬಂಧಿಸಿದ ಮಾಹಿತಿಗಾಗಿ 8277971008 ಗೆ ಸಂಪರ್ಕಿಸಬಹುದು ಎಂದು ಎಸ್ಪಿ ಋಷಿಕೇಶ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ. ಅಲ್ಲದೇ, ಅಪಘಾತ ಸೇರಿದಂತೆ ಸಂಚಾರಿ ಪೊಲೀಸ ಠಾಣೆಗೆ ಸಂಬಂಧಿಸಿದ ಮಾಹಿತಿಗಾಗಿ ಕಾಲ್ ಹಾಗೂ ವಾಟ್ಸ್ಆಫ್ ಮಾಡಬಹುದು ಎಂದು ಎಸ್ಪಿ ತಿಳಿಸಿದ್ದಾರೆ.