ವಿಜಯಪುರ: ಸಿಇಎನ್ ಪೊಲೀಸ ಠಾಣೆಯಲ್ಲಿ 41 ಕೇಸ್ ದಾಖಲು ಆಗಿದೆ ಎಂದು ಎಸ್ಪಿ ಋಷಿಕೇಶ್ ಸೋನವಾಣೆ ಹೇಳಿದರು. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 41 ಕೇಸ್ನಲ್ಲಿ 2,95,11,323 ನಗದು ವಂಚನೆ ಕೇಸ್ನಲ್ಲಿ 1,08,24,887 ನಗದು ಮರಳಿ ದೂರುದಾರರಿಗೆ ನೀಡಲಾಗಿದೆ. ಇನ್ನುಳಿದಂತೆ ಆರೋಪಿತರ ಬ್ಯಾಂಕ್ ಖಾತೆಗಳಲ್ಲಿ 99,76,252 ಡೇಬಿಟ್ ಪ್ರೀಜ್ ಮಾಡಲಾಗಿದೆ ಎಂದರು. ಅಲ್ಲದೇ, ಸನ್ 2023ರಲ್ಲಿ ಸೈಬರ್ ಆನ್ಲೈನ್ ಮೂಲಕ 23 ಜನ ನೊಂದ ದೂರುದಾರರು ಗೋಲ್ಡನ್ ಅವರ್ (ಒಂದು ಗಂಟೆ) ನೇರವಾಗಿ 1930ಗೆ ಕರೆ ಮಾಡಿದ್ದು, ವರದಿಯಲ್ಲಿ 11,76,016 ನಗದು ವಂಚನೆಯಾಗಿರುವ ಅರ್ಜಿಗಳ ಮೂಲಕ ಇತ್ಯರ್ಥ ಪಡಿಸಿ ದೂರುದಾರರಿಗೆ 9,40,566 ಮರಳಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದರು.