ವಿಜಯಪುರ: ಅಕ್ರಮವಾಗಿ ಮಕ್ಕಳ ಹಾಲಿನ ಪೌಡರ್ ಸಾಗಾಟ ಮಾಡುವಾಗ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಥರ್ಗಾ ಗ್ರಾಮದಲ್ಲಿ ನಡೆದಿದೆ. ಸುಮೀತ ಸಾತಪುತೆ, ನಿಶಾಂತ ಕಲಶೆಟ್ಟಿ, ದುಂಡಪ್ಪ ಗಂಗನಹಳ್ಳಿ ಬಂಧಿತ ಆರೋಪಿಗಳು. ಇನ್ನೂ ಆರೋಪಿಗಳಿಂದ 30 ಕೆಜಿಯ 66 ಪ್ಲಾಸ್ಟಿಕ್ ಬ್ಯಾಗ್, 20 ಕೆಜಿಯ ಒಂದು ಬ್ಯಾಗ್ ಹಾಗೂ ಒಂದು ಪಿಕ್ ಆಫ್ ವಾಹನ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಇಂಡಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.