ವಿಜಯಪುರ: ಇಸ್ರೇಲ್ನಲ್ಲಿ ಸಿಲುಕಿದ ವಿಜಯಪುರದ ಸಹಾಯಕ ಪ್ರಾಧ್ಯಾಪಕ ವಿಜಯಪುರ ನಗರಕ್ಕೆ ಆಗಮಿಸಿದ್ದಾರೆ. ಜೆರುಸೆಲಂ ನಿಂದ ವಿಮಾನ ಮೂಲಕ ಸ್ವದೇಶಕ್ಕೆ ಸುಮೇಶ್ ಗೋವಿಂದ ಆಗಮಿಸಿದ್ದಾರೆ. ಇನ್ನು ಸಹಾಯಕ ಪ್ರಾಧ್ಯಾಪಕ ಡಾ. ಸುಮೇಶ್ ಗೋವಿಂದ ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ಗೆ ಸುಮೇಶ್ ಭೇಟಿ ನೀಡಿ ಇಸ್ರೇಲ್ನಲ್ಲಿನ ಪರಿಸ್ಥಿತಿ ಹಂಚಿಕೊಂಡಿದ್ದಾರೆ. ಈ ವೇಳೆ ಡಿಸಿ ಭೂಬಾಲನ್ ಸುಮೇಶ್ಗೆ ಸಿಹಿ ತಿನ್ನಿಸಿದರು. ಅಲ್ಲದೇ, ಸುಮೇಶ್ ವಿಜಯಪುರದ ಹಿಟ್ನಳ್ಳಿಯ ಕೃಷಿ ಸಂಶೋಧನಾ ಕೇಂದ್ರದ ಹವಾಮಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಆಗಿದ್ದಾರೆ.