ವಿಜಯಪುರ: ಹೆಂಡತಿಯನ್ನು ಹತ್ಯೆಗೈದು ಬಾವಿಯಲ್ಲಿ ಎಸೆದಿರುವ ಘಟನೆ ವಿಜಯಪುರ ತಾಲ್ಲೂಕಿನ ನಾಗಠಾಣ ಗ್ರಾಮದಲ್ಲಿ ನಡೆದಿದೆ. ರೇಖಾ ನಾಗಪ್ಪ ಕೊಣ್ಣೂರ ಹತ್ಯೆಯಾಗಿರುವ ದುರ್ದೈವಿ. ಇನ್ನು ಆರೋಪಿಗಳಾದ ಗಂಡ ನಾಗಪ್ಪ ಶಂಕರೆಪ್ಪ ಕೊಣ್ಣೂರ, ಶಂಕರೆಪ್ಪ ಕೊಣ್ಣೂರ, ಸುಸಲವ್ವ ಕೊಣ್ಣೂರ ವಿರುದ್ಧ ಕೇಸ್ ದಾಖಲಾಗಿದೆ. ಅಲ್ಲದೇ, ಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಜಯಪುರ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.