ವಿಜಯಪುರ: ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅರ್ಹತಾ ದಿನಾಂಕ : 01-01-2024ಕ್ಕೆ ಸಂಬಂಧಿಸಿದಂತೆ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ 9,68,133 ಪುರುಷ ಮತದಾರರು, 9,30,898 ಮಹಿಳಾ ಮತದಾರರು ಹಾಗೂ 217 ಇತರೆ ಮತದಾರರು ಸೇರಿದಂತೆ ಒಟ್ಟು 18,99,248 ಮತದಾರರಿದ್ದು, ದಿನಾಂಕ : 05-01-2024 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಚುರಪಡಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿ ಮಾಧ್ಯಮಗೋಷ್ಠಿ ನಡೆಸಿದ ಅವರು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಿನಾಂಕ : 25-09-2023ರನ್ವಯ ಮತದಾರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅರ್ಹತಾ ದಿನಾಂಕ : 01-01-2024ಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಕುರಿತು ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ. ವೇಳಾಪಟ್ಟಿಯಂತೆ ದಿನಾಂಕ : 27-10-2023 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸುವುದು, ದಿನಾಂಕ : 27-10-2023 ರಿಂದ 09-12-2023ರವರೆಗೆ ಹಕ್ಕು ಮತ್ತು ಆಕ್ಷೇಪಣೆಗೆ ಅವಕಾಶ, ನಂತರ ವಿಶೇಷ ಕ್ಯಾಂಪೇನ್ಗಳ ದಿನಾಂಕ ಹಾಗೂ ದಿನಾಂಕ : 26-12-2023 ರಂದು ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ, ದಿನಾಂಕ : 05-01-2024 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು. ವಿಧಾನಸಭಾ ವಿವರವಾರು ಮತದಾರರ ವಿವರದಂತೆ 26-ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 110256 ಗಂಡು, 107561 ಹೆಣ್ಣು ಹಾಗೂ 20 ಇತರೆ ಮತದಾರರು ಸೇರಿದಂತೆ ಒಟ್ಟು 217837 ಮತದಾರರಿದ್ದಾರೆ. 27-ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 112666 ಗಂಡು, 106840 ಹೆಣ್ಣು ಹಾಗೂ 20 ಇತರೆ ಸೇರಿದಂತೆ ಒಟ್ಟು 219526 ಮತದಾರರಿದ್ದಾರೆ. 28-ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ 107682 ಗಂಡು, 103932 ಹೆಣ್ಣು ಹಾಗೂ 14 ಇತರೆ ಸೇರಿದಂತೆ ಒಟ್ಟು 211628 ಮತದಾರರಿದ್ದಾರೆ. 29-ಬಬಲೇಶ್ವರ ಮತಕ್ಷೇತ್ರದಲ್ಲಿ 111075 ಗಂಡು, 106947 ಹೆಣ್ಣು ಹಾಗೂ 5 ಇತರೆ ಸೇರಿದಂತೆ 218027 ಮತದಾರರಿದ್ದಾರೆ. 30-ಬಿಜಾಪುರ ನಗರ ಮತಕ್ಷೇತ್ರದಲ್ಲಿ 140231 ಗಂಡು, 142523 ಹೆಣ್ಣು ಹಾಗೂ 92 ಇತರೆ ಮತದಾರರು ಸೇರಿದಂತೆ ಒಟ್ಟು 282846 ಮತದಾರರಿದ್ದಾರೆ.31-ನಾಗಠಾಣ ಮತಕ್ಷೇತ್ರದಲ್ಲಿ 138340 ಗಂಡು, 130864 ಹೆಣ್ಣು ಹಾಗೂ 20 ಇತರೆ ಸೇರಿದಂತೆ ಒಟ್ಟು 269224 ಮತದಾರರಿದ್ದಾರೆ. 32-ಇಂಡಿ ಮತಕ್ಷೇತ್ರದಲ್ಲಿ 125758 ಗಂಡು, 117356 ಹೆಣ್ಣು ಹಾಗೂ 18 ಇತರೆ ಸೇರಿದಂತೆ ಒಟ್ಟು 243132 ಮತದಾರರಿದ್ದಾರೆ. 33-ಸಿಂದಗಿ ಮತಕ್ಷೇತ್ರದಲ್ಲಿ 122125 ಗಂಡು, 114875 ಹೆಣ್ಣು ಹಾಗೂ 28 ಇತರೆ ಸೇರಿದಂತೆ ಒಟ್ಟು 237028 ಮತದಾರರಿದ್ದು, ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳಲ್ಲಿ 968133 ಗಂಡು, 930898 ಹೆಣ್ಣು ಹಾಗೂ 217 ಸೇರಿದಂತೆ ಒಟ್ಟು 18,99,248 ಮತದಾರರಿದ್ದಾರೆ ಎಂದು ತಿಳಿಸಿದರು. ಜಿಲ್ಲೆಯ ಮತಗಟ್ಟೆಗಳ ವಿವರ : ಈ ಮೊದಲಿದ್ದ 2072 ಮತಗಟ್ಟೆಗಳಲ್ಲಿ ಒಂದೇ ಆವರಣದ ಒಂದೇ ಕಟ್ಟಡದಲ್ಲಿರುವ ಮತಗಟ್ಟೆಯ ಮತದಾರರನ್ನು ಪಕ್ಕದಲ್ಲಿರುವ ಮತಗಟ್ಟೆಗೆ ವಿಲೀನಗೊಳಿಸಲಾಗಿದೆ. ಜಿಲ್ಲೆಯ ಬಸವನಬಾಗೇವಾಡಿ ವಿಧಾನಸಭಾ ಮತಕ್ಷೇತ್ರದದಲ್ಲಿ 02 ಹಾಗೂ ಸಿಂದಗಿ ಮತಕ್ಷೇತ್ರದಲ್ಲಿ 03 ಸೇರಿದಂತೆ ಒಟ್ಟು 5 ಮತಗಟ್ಟೆಗಳನ್ನು ವಿಲೀನಗೊಳಿಸಲಾಗಿದೆ ಹಾಗೂ 1500ಕ್ಕಿಂತ ಹೆಚ್ಚಿನ ಮತದಾರರಿರುವ ಮತಗಟ್ಟೆಗಳಲ್ಲಿ ಹೊಸದಾಗಿ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 04, ಬಿಜಾಪುರ ನಗರ ಮತಕ್ಷೇತ್ರದಲ್ಲಿ 13 ಹಾಗೂ ನಾಗಠಾಣ ಮತಕ್ಷೇತ್ರದಲ್ಲಿ 01 ಸೇರಿದಂತೆ ಒಟ್ಟು 18 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 2085 ಮತಗಟ್ಟೆಗಳು ಅಸ್ವಿತ್ವದಲ್ಲಿವೆ. ವಿಧಾನಸಭಾ ಕ್ಷೇತ್ರವಾರು ವಿವರದಂತೆ 26-ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಈ ಮೊದಲು 241 ಮತಗಟ್ಟೆಗಳಿದ್ದು, 1500ಕ್ಕಿಂತ ಹೆಚ್ಚಿನ ಮತದಾರರಿರುವ ಮತಗಟ್ಟೆಗಳಲ್ಲಿ ಹೊಸದಾಗಿ 04 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು 245 ಮತಗಟ್ಟೆಗಳಿವೆ. ಅದರಂತೆ 27- ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 252, 28-ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಈ ಮೊದಲು 232 ಮತಗಟ್ಟೆಗಳಿದ್ದು, 2 ಮತಗಟ್ಟೆಗಳನ್ನು ವಿಲೀನಗೊಳಿಸಿದ್ದು, ಒಟ್ಟು 230 ಮತಗಟ್ಟೆಗಳು ಅಸ್ವಿತ್ವದಲ್ಲಿವೆ. 29-ಬಬಲೇಶ್ವರ ಮತಕ್ಷೇತ್ರದಲ್ಲಿ 243, 30-ಬಿಜಾಪುರ ನಗರ ಮತಕ್ಷೇತ್ರದಲ್ಲಿ ಈ ಮೊದಲು 269 ಮತಗಟ್ಟೆಗಳಿದ್ದು, 13 ಹೊಸ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು 282 ಮತಗಟ್ಟೆಗಳಿವೆ. 31-ನಾಗಠಾಣ ಮತಕ್ಷೇತ್ರದಲ್ಲಿ ಈ ಮೊದಲು 296 ಮತಗಟ್ಟೆಗಳಿದ್ದು, ಹೊಸದಾಗಿ 1 ಮತಗಟ್ಟೆ ಸ್ಥಾಪಿಸಿದ್ದು, ಒಟ್ಟು 297 ಮತಗಟ್ಟೆಗಳಿವೆ. 32-ಇಂಡಿ ಮತಕ್ಷೇತ್ರದಲ್ಲಿ 268 ಮತಗಟ್ಟೆಗಳು, 33-ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಈ ಮೊದಲು 271 ಮತಗಟ್ಟೆಗಳಿದ್ದು, 3 ಮತಗಟೆಗಳನ್ನು ವಿಲೀನಗೊಳಿಸಲಾಗಿದೆ. ಒಟ್ಟು 268 ಮತಗಟ್ಟೆಗಳಿವೆ. ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಈ ಮೊದಲು 2072 ಮತಗಟ್ಟೆಗಳಿದ್ದು, 05 ಮತಗಟ್ಟೆಗಳನ್ನು ವಿಲೀನಗೊಳಿಸಿದ್ದು, 18 ಹೊಸ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು ಜಿಲ್ಲೆಯಾದ್ಯಂತೆ 2085 ಮತಗಟ್ಟೆಗಳಿವೆ ಅಸ್ವಿತ್ವದಲ್ಲಿವೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ-ತೆಗೆದು ಹಾಕಲು ಅವಕಾಶ: ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವುದನ್ನು ವೋಟರ್ ಹೆಲ್ಪಲೈನ್ ಮೊಬೈಲ್ ಆಪ್ ಅಥವಾ ಓಗಿSP ಪೋರ್ಟಲ್ ಅಥವಾ ತಿತಿತಿ.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಪರಿಶೀಲಿಸಿ ಖಚಿತಪಡಿಸಿಕೊಳ್ಳಬಹುದಾಗಿದೆ. ಖಚಿತಪಡಿಸಿಕೊಂಡ ನಂತರ ಯಾವುದಾದರೂ ತಿದ್ದುಪಡಿ ಮತದಾರ ಪಟ್ಟಿಯಿಂದ ಹೆಸರು ತೆಗೆಯಬೇಕಾದಲ್ಲಿ, ಹೊಸ ಸೇರ್ಪಡೆಗಾಗಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ದಿನಾಂಕ: 27-10-2023 ರಿಂದ 09-12-2023ರ ಅವಧಿಯಲ್ಲಿ ಹೊಸದಾಗಿ ಸೇರ್ಪಡೆಗೊಳಿಸಲು ನಮೂನೆ 6, ಮತದಾರ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಲು ನಮೂನೆ-7, ಮತದಾರ ಗುರುತಿನ ಚೀಟಿಗೆ ಆಧಾರ ಸಂಖ್ಯೆ ಅಥವಾ ಇತರೆ ದಾಖಲೆಗಳ ಜೋಡಣೆಗೆ ನಮೂನೆ-6ಬಿ, ತಿದ್ದುಪಡಿ, ಬದಲಿ ಗುರುತಿನ ಚೀಟಿ, ಒಂದು ವಿಧಾನಸಭಾ ಮತಕ್ಷೇತ್ರದಿಂದ ಮತ್ತೊಂದು ವಿಧಾನಸಭಾ ಕ್ಷೇತ್ರಕ್ಕೆ ಅಥವಾ ಒಂದೇ ವಿಧಾನಸಭಾ ಕ್ಷೇತ್ರದಲ್ಲಿರುವ ಭಾಗಕ್ಕೆ ಸ್ಥಳಾಂತರಕ್ಕಾಗಿ ನಮೂನೆ-8ರಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಎಂದು ಅವರು ತಿಳಿಸಿದರು. ವಿಶೇಷ ಕ್ಯಾಂಪೇನ್ಗಳ ಸದುಪಯೋಗಕ್ಕೆ ಮನವಿ : ಹಕ್ಕು ಹಾಗೂ ಆಕ್ಷೇಪೆಣೆ ಅವಧಿಯಲ್ಲಿ ದಿನಾಂಕ : 18-11-2023, 19-11-2023, 02-12-2023 ಹಾಗೂ 03-12-2023 ರಂದು ವಿಶೇಷ ಕ್ಯಾಂಪೇನ್ಗಳನ್ನು ನಡೆಸಿ, ಕಾಂಪೇನ್ ದಿನಾಂಕದಂದು ಎಲ್ಲ ಮತಗಟ್ಟೆ ಮಟ್ಟದ ಅಧಿಕಾರಿಗಳು ಆಯಾ ಮತಗಟ್ಟೆಯ ವ್ಯಾಪ್ತಿಯಲ್ಲಿ ಮನೆ ಮನೆ ಸರ್ವೇ ಕಾರ್ಯ ಕೈಗೊಳ್ಳಲಿದ್ದು, ಈ ಅವಧಿಯಲ್ಲಿ ಹೊಸ ಸೇರ್ಪಡೆ, ತಿದ್ದುಪಡಿ, ಸ್ಥಳಾಂತರ, ಮತದಾರ ಪಟ್ಟಿಯಿಂದ ಹೆಸರು ಕೈಬಿಡುವುದು ಹಾಗೂ ಇತರೆ ಸೇವೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ. ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ನಾಲ್ಕು ಬಾರಿ ಅವಕಾಶ : ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಗಾಗಿ ಈ ಮೊದಲು ವರ್ಷಕ್ಕೆ ಒಂದು ಬಾರಿ ಅಂದರೆ ಪ್ರತಿ ವರ್ಷ ಅರ್ಹತಾ ದಿನಾಂಕ ಜನವರಿ 1 ರಂದು 18 ವರ್ಷ ಪೂರೈಸಿದ ಮತದಾರರನ್ನು ತಮ್ಮ ಹೆಸರನ್ನು ಸೇರ್ಪಡೆಗೆ ಅವಕಾಶವಿತ್ತು. ಪ್ರಸ್ತುತ ಕಾಯ್ದೆಯಲ್ಲಿ ಜನವರಿ-01, ಏಪ್ರಿಲ್-01, ಜುಲೈ-01 ಹಾಗೂ ಅಕ್ಟೋಬರ್-01 ಸೇರಿದಂತೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು 04 ಅರ್ಹತಾ ದಿನಾಂಕಗಳ ಅವಕಾಶ ಕಲ್ಪಿಸಲಾಗಿದೆ. ಮತದಾರ ಪಟ್ಟಿಗೆ ಸಂಬಂಧಿಸಿದಂತೆ ಆನ್ಲೈನ್ ಫ್ಲಾಟ್ಫಾರ್ಮಗಳಾದ ವಿಎಚ್ಎ, ಎನ್ವಿಎಸ್ಪಿ ಹಾಗೂ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಸಂಪರ್ಕಿಸಿ ಗಡುಡ್ ಆಪ್ ಮೂಲಕವೂ ಕೂಡಾ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ. ಮತದಾರ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ಗೊಂದಲ-ಸಮಸ್ಯೆಗಳಿದ್ದಲ್ಲಿ ಜಿಲ್ಲಾ ವ್ಯಾಪ್ತಿಯಿಂದ ಈ ಕಚೇರಿಯ ದೂರು ನಿರ್ವಹನಾ ಕೇಂದ್ರದ ಟೋಲ್ ಫ್ರೀ ಸಂಖ್ಯೆ 1950ಗೆ ಹಾಗೂ ಹೊರ ಜಿಲ್ಲೆಗಳಿಂದ ಜಿಲ್ಲಾ ದೂರು ನಿರ್ವಹಣಾ ಕೇಂದ್ರದ ಟೋಲ್ ಫ್ರೀ ಸಂಖ್ಯೆ 08352-1950ಗೆ ಸಂಪರ್ಕಿಸಬಹುದಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳಾದ ಋಷಿಕೇಶ ಸೋನಾವಣೆ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಪತ್ರಿಕಾಗೋಷ್ಠಿಯಲ್ಲಿದ್ದರು.