ಶಿವಮೊಗ್ಗ: ನಗರದ ರೈಲ್ವೆ ನಿಲ್ದಾಣದ ಬಳಿ ಎರಡು ಅನುಮಾನ್ಪದ ಬಾಕ್ಸ್ಗಳು ಪತ್ತೆಯಾಗಿದ್ದಾವೆ. ಇನ್ನು ಎರಡು ಬಾಕ್ಸ್ಗಳನ್ನು ಬಾಂಬ್ ಸ್ಕ್ವಾಡ್ ಬಂದು, ಸ್ಫೋಟಿಸಿದ್ದಾರೆ ಸ್ಫೋಟಿಸಿ ಪರಿಶೀಲಿಸಿದಾಗ ಎರಡು ಬಾಕ್ಸ್ಗಳಲ್ಲಿ ಬಿಳಿಯ ಪೌಡರ್ ಬ್ಯಾಗ್ಗಳು ಸಿಕ್ಕಿದ್ದಾವೆ. ಪತ್ತೆಯಾದ ಬಿಳಿ ಪೌಡರ್ನ ಬ್ಯಾಗ್ಗಳು ಸ್ಪೋಟಕ ವಸ್ತು ಅಲ್ಲ ಎಂದು ಎಸ್ಪಿ ಮಾಹಿತಿ ತಿಳಿಸಿದ್ದಾರೆ. ಆದ್ರೇ, ಎಫ್ ಎಸ್ ಎಲ್ ವರದಿ ಬಂದ ನಂತರವೇ ಸ್ಪಷ್ಟವಾಗಲಿದೆ. ಈ ವೇಳೆ ಶಾಸಕ ಚನ್ನಬಸಪ್ಪ ಮಾತನಾಡಿ, ನಮ್ಮ ಶಿವಮೊಗ್ಗ ಸೇಫ್. ಆದ್ರೇ, ಈ ಬಗ್ಗೆ ತನಿಖೆ ಆರಂಭ ಆಗಬೇಕಿದೆ. ಈ ಪೌಡರ್ ಏನೂ ಎಂದು ವರದಿ ಬರಬೇಕಿದೆ. ವೈಟ್ ಪೌಡರ್ ಏನುಕ್ಕೆ ಬಳಸುತ್ತಾರೆ ಎಲ್ಲಿರಿಗೂ ಗೊತ್ತು? ಬಾಂಬ್ ಸ್ಕ್ವಾಡ್ ಬಂದಿದೆ. ಬೀಗ ಹೊಡೆಯಲು ಸ್ಫೋಟ ಮಾಡಿದ್ರು ಎರಡು ಹೊಸ ಟ್ರಂಕ್ ಪತ್ತೆಯಾಗಿದೆ. ಒಂದೊಂದು ಟ್ರಂಕ್ನಲ್ಲಿ ಎರಡೆರಡು ಬ್ಯಾಗ್ ಗಳಿವೆ ಪೇಪರ್ ಹಾಕಿ ಕವರ್ ಮಾಡಿದ್ದಾರೆ. ಬಿಳಿ ಬಣ್ಣದ ಪೌಡರ್ ಪತ್ತೆಯಾಗಿದೆ. ವೈಟ್ ಪೌಡರ್ ಏನಕ್ಕೆ ಉಪಯೋಗಿಸುತ್ತಾರೆ ಅಂತಾ ಎಲ್ಲರಿಗೂ ಗೊತ್ತಿದೆ. ಮುಖಕ್ಕೆ ಹಚ್ಚುವ ಪೌಡರ್ ಅಂತೂ ಅಲ್ಲ. ದೇವರು ದೊಡ್ಡವನು ಈ ಹಂತದಲ್ಲಿ ತಡೆ ಹಿಡಿಯುವ ಪ್ರಯತ್ನ ಆಗಿದೆ. ಇದು ಯಾವ ಪೌಡರ್ ಎಂಬ ಬಗ್ಗೆ ರಿಪೋರ್ಟ್ ಬರಬೇಕು. ಇದು ಗಂಭೀರವಾದ ಸಂಗತಿ ಬಾಕ್ಸ್ ಗಳು ಬಹಳಷ್ಟು ಭಾರವಿದೆ. ಈಗಾಗಲೇ ಇಬ್ಬರು ಸಿಕ್ಕಿದ್ದಾರೆ. ಸಿಕ್ಕಿಬಿದ್ದವರನ್ನ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಸತ್ಯ ಸಂಗತಿ ಏನೇ ಇದ್ದರೂ ಅದನ್ನು ಪೊಲೀಸ್ ಇಲಾಖೆ ಬಹಿರಂಗಪಡಿಸಬೇಕಿದೆ ಎಂದರು.