ವಿಜಯಪುರ: ತನಿಷ್ಕಾ ಜೆವೆಲ್ಲರ್ಸ್ನಲ್ಲಿ ಬುರ್ಖಾಧಾರಿಗಳಿಂದ ಭಾರಿ ಪ್ರಮಾಣದ ಚಿನ್ನಾಭರಣ ಕಳ್ಳತನಗೈದು ಎಸ್ಕೇಪ್ ಆಗಿರುವ ಘಟನೆ ವಿಜಯಪುರ
ಇಲ್ಲಿನ ಗುರುಕುಲ ರಸ್ತೆಯಲ್ಲಿ ನಡೆದಿದೆ. 1,20,284 ಮೌಲ್ಯದ 22 ಕ್ಯಾರೆಟ್ನ 16.62 ಗ್ರಾಂ ತೂಕದ ಚಿನ್ನವನ್ನು ಕದ್ದು ಪರಾರಿಯಾಗಿದ್ದಾರೆ. ಇನ್ನೂ ಶೋ ರೂಮ್ನಲ್ಲಿ ಕೆಲಸ ಮಾಡುವ ಪೂರ್ಣಿಮಾ ತೇಲಕರ ಬಂಗಾರದ ಆಭರಣಗಳನ್ನು ತೋರಿಸುವಾಗ ಬುರ್ಖಾಧಾರಿಗಳು ಕೌಂಟರ್ ಮೇಲಿಟ್ಟಿದ್ದ ಚಿನ್ನದ ಸರ ಕದ್ದು ಎಸ್ಕೇಪ್ ಆಗಿದ್ದಾರೆ. ತನಿಷ್ಕಾ ಜೆವೆಲರ್ಸ್ ಶೋ ರೂಂ ಮ್ಯಾನೇಜರ್ ಸಿದ್ದು ರೇವಿ ದೂರು ನೀಡಿದ್ದಾರೆ. ಈ ಕುರಿತು ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.