ವಿಜಯಪುರ: ಹಳೆ ವೈಷಮ್ಯ ಹಿನ್ನೆಲೆ ಓರ್ವನ ಮೇಲೆ ದುಷ್ಕರ್ಮಿಗಳು ಫೈರಿಂಗ್ ಮಾಡಿರುವ ಘಟನೆ ವಿಜಯಪುರ ನಗರದ ಬೆಂಡಿಗೇರಿ ಓಣಿಯಲ್ಲಿ ನಡೆದಿದೆ. ಶೋಯೆಬ್ ಮೇಲೆ ಫೈರಿಂಗ್ ಮಾಡಿದ ದುಷ್ಕರ್ಮಿಗಳು ಫೈರಿಂಗ್ ಮಾಡಿದ್ದಾರೆ. ಇನ್ನು ರೌಡಿಶೀಟರ್ ಶೇಖ್ ಮೋದಿ ಅಳಿಯ ಶೋಯೆಬ್ ಮೇಲೆ ಫೈರಿಂಗ್ ನಡೆಸಿ, ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಗಾಯಾಳು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಎಸ್ಪಿ ಸೋನವಾಣೆ ಭೇಟಿ ಪರಿಶೀಲನೆ ನಡೆಸಿದರು. ಗೋಳಗುಮ್ಮಟ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.