ವಿಜಯಪುರ: ಬಿಜೆಪಿ ಯುವಕರಿಗೆ ಪ್ರೋತ್ಸಾಹ ಕೊಡುತ್ತದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಬಿಜೆಪಿ ಕಟ್ಟಿ ಬೆಳೆಸಿದ್ದಾರೆ. ಬಿಎಸ್ವೈ ಜೊತೆ ಕೆಲಸ ಮಾಡುವ ಅವಕಾಶ ನನಗೂ ಸಿಕ್ಕಿದೆ. ವಿಜಯೇಂದ್ರ ಅವರ ನಾಯಕತ್ವದಲ್ಲಿ ಯುವಕರು ಸಂಘಟಿತರಾಗಿ, 25ಕ್ಕೂ ಅಧಿಕ ಲೋಕಸಭೆ ಸೀಟ್ ಗೆಲ್ಲಿಸಲಿದ್ದಾರೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲಿದ್ದಾರೆ ಎಂಬ ವಿಶ್ವಾಸ ಇದೆ. ಬಿಜೆಪಿ ಯುವಕರಿಗೆ ಅವಕಾಶ ಕೊಡುವ ಕೆಲಸ ಮಾಡುತ್ತದೆ ಎಂದರು. ಅಲ್ಲದೇ, ಈಗಷ್ಟೆ ವಿಜಯೇಂದ್ರ ಫೋನ್ ಮಾಡಿದ್ರು, 15ರಂದು ಪಕ್ಷದ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ರಾಜ್ಯಾಧ್ಯಕ್ಷ ಆಯ್ಕೆ ಭಿನ್ನಾಭಿಪ್ರಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜಕಾರಣದಲ್ಲಿ ಇದ್ದವರು, ಚುನಾವಣೆ ರಾಜಕಾರಣಲ್ಲಿದ್ದವರು, ಹುದ್ದೆಗಳನ್ನು ಸಹಜವಾಗಿಯೇ ಅಪೇಕ್ಷೆ ಪಡುತ್ತಾರೆ. ಕಳೆದ ಬಾರಿ ಚುನಾವಣೆಯಲ್ಲಿ ನಾವು ಸರ್ಕಾರವನ್ನು ಕಳೆದುಕೊಂಡಿದ್ದೇವೆ. ಹಾಗಾಗಿ ಅಳದು ತೂಗಿ ಹೈಕಮಾಂಡ್ ನಿರ್ಧಾರ ಮಾಡಿರುತ್ತದೆ. ಅದಕ್ಕೆ ನಾವೆಲ್ಲ ಬೆಂಬಲಿಸಬೇಕು, ಅಸಮಾಧಾನ ಇದ್ದವರು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಕಾಗುತ್ತದೆ. ಭಿನ್ನಾಭಿಪ್ರಾಯ ಎಲ್ಲೂ ಇಲ್ಲ. ಒಂದೆರೆಡು ದಿನ ಅಸಮಾಧಾನ ಇರುತ್ತೆ. ಅದೆಲ್ಲ ಸರಿಯಾಗುತ್ತದೆ. ಕಾಂಗ್ರೆಸ್ ನವರು ಸುಳ್ಳು ಗ್ಯಾರೆಂಟಿ ಕೊಟ್ಟಿದ್ದಾರೆ. ಅವರ ಪ್ರಣಾಳಿಕೆಯಲ್ಲಿ ಇರುವುದು ಸುಳ್ಳು ಹೇಳಿದ್ದಾರೆ. ಯುವಕರಿಗೆ ಹಣ ಕೊಡ್ತಿವಿ ಎಂದ್ರು ಕೊಡಲಿಲ್ಲ, ಅದೇ ಯುವಕರು ಬಡಿಗೆ ತೆಗೆದುಕೊಂಡು ಓಡಿಸ್ತಾರೆ. ಲೋಕಸಭೆ ಚುನಾವಣೆಯಲ್ಲಿ ಜನರೇ ಇವರನ್ನು ಓಡಿಸ್ತಾರೆ. ಬಿಜೆಪಿ ದೊಡ್ಡ ಪಕ್ಷವಾಗಿ ಪ್ರತಿಪಕ್ಷವಾಗಿ ವಿರೋಧಪಕ್ಷ ಕೆಲಸ ಮಾಡ್ತದೆ. ಬಿಜೆಪಿ ನವರೇ ವಿರೋಧಪಕ್ಷದ ನಾಯಕ ಆಗ್ತಾರೆ. ಮೈತ್ರಿಯಲ್ಲಿ ಅಧಿಕಾರ ಹಂಚಿಕೆ ಮಾಡಬಹುದು. ಮೈತ್ರಿಯಲ್ಲಿ ವಿರೋಧಪಕ್ಷ ಸ್ಥಾನ ಕೊಡಲು ಬರೋದಿಲ್ಲ. ಹಾಗಾಗಿ ಬಿಜೆಪಿಯವರೇ ಶೀಘ್ರದಲ್ಲೇ ವಿರೋಧ ಪಕ್ಷದ ನಾಯಕರಾಗ್ತಾರೆ. ನಾನು ಲೋಕಸಭೆಗೆ ಸ್ಪರ್ಧೆ ಮಾಡೋದಿಲ್ಲ. ಸಿದ್ರಾಮಯ್ಯನವರು ಸುಳ್ಳು ಗ್ಯಾರೆಂಟಿ ಕೊಟ್ಟಿದ್ದಾರೆ. ತಾಕತ್ ಇದ್ರೆ ಲೋಕಸಭೆ ಚುನಾವಣೆ ಎದುರಿಸಲಿ ಎಂದು ಸಿದ್ರಾಮಯ್ಯನವರಿಗೆ ಸವಾಲ್ ಹಾಕಿದರು