ವಿಜಯಪುರ: ಡಿಪ್ಲೊಮಾ ಫಲಿತಾಂಶ ನೋಡಿಕೊಂಡು ಬರುತ್ತೇನೆ ಎಂದು ಹೋಗಿದ್ದ ಮಹಿಳೆ ನಾಪತ್ತೆಯಾಗಿರುವ ಘಟನೆ ವಿಜಯಪುರದ ಆದರ್ಶನಗರದಲ್ಲಿ ನಡೆದಿದೆ ವೈಷ್ಣವಿ ಗಂಡ ಆದಿತ್ಯ ಪಾಟೀಲ ನಾಪತ್ತೆಯಾಗಿರುವ ಮಹಿಳೆ. ಇನ್ನೂ ಕಾಲೇಜಿನಲ್ಲಿ ಡಿಪ್ಲೊಮಾ ಫಲಿತಾಂಶ ನೋಡಳು ಹೋಗಿದ್ದಾಳೆ. ಆದ್ರೆ, ಮರಳಿ ಮನೆಗೆ ಬಂದಿಲ್ಲ. ಹಳದಿ ಬಣ್ಣದ ಟಾಪ್, ಬಿಳಿ ಬಣ್ಣದ ಲಗಿನ್ಸ್ ಧರಿಸಿದ್ದಾಳೆ ಎಂದು ಪೊಲೀಸ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ. ಕನ್ನಡ, ಹಿಂದಿ, ಇಂಗ್ಲಿಷ್, ತೆಲುಗು ಮಾತನಾಡುತ್ತಾಳೆ. ಅದಕ್ಕಾಗಿ ಮಾಹಿತಿ ತಿಳಿದು ಬಂದ್ರೇ 08352263333ಗೆ ಸಂಪರ್ಕಿಸುವಂತೆ ಆದರ್ಶನಗರ ಪೊಲೀಸರು ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.
![](https://karnataka1news.com/wp-content/uploads/2023/11/IMG_20231117_143619-872x1024.jpg)