ವಿಜಯಪುರ: ಬಿಜೆಪಿ ವಿರುದ್ಧ ಪಂಚಮಸಾಲಿ ಶ್ರೀಗಳು ಅಸಮಧಾನ ಹೊರಹಾಕಿದರು. ವಿಜಯಪುರದಲ್ಲಿ ಕೂಡಲ ಸಂಗಮ ಪೀಠಾಧ್ಯಕ್ಷ ಜಯಮೃತ್ಯುಂಜಯ ಶ್ರೀಗಳು ಮಾತನಾಡಿ, ರಾಜ್ಯಾಧ್ಯಕ್ಷ ಅಥವಾ ವಿರೋಧ ಪಕ್ಷ ನಾಯಕ ಸ್ಥಾನ ಪಂಚಮಸಾಲಿ ಸಮಾಜಕ್ಕೆ ನೀಡಬೇಕಿತ್ತು. ಶಾಸಕ ಬಸನಗೌಡ ಯತ್ನಾಳರಿಗೆ ವಿರೋಧ ಪಕ್ಷದ ನಾಯಕ ಸ್ಥಾನ ಸಿಗುವ ನಿರೀಕ್ಷೆ ಇತ್ತು, ಹುಸಿಯಾಗಿದೆ. ಉತ್ತರ ಕರ್ನಾಟಕಕ್ಕೂ ಅನ್ಯಾಯವಾಗಿದೆ. ಉತ್ತರ ಕರ್ನಾಟಕದವರಗೆ ವಿರೋಧ ಪಕ್ಷ ನಾಯಕ ಸ್ಥಾನ ನೀಡಬೇಕಿತ್ತು. ಇಲ್ಲವೇ ಪಂಚಮಸಾಲಿ ಸಮುದಾಯಕ್ಕಾದರು ಸಿಗಬೇಕಿತ್ತು. ಬಿಜೆಪಿ ಮೊದಲಿನಿಂದಲು ಪಂಚಮಸಾಲಿ ನಾಯಕರನ್ನು ನಿರ್ಲಕ್ಷ್ಯ ಮಾಡುತ್ತ ಬಂದಿದೆ. ಬಿಜೆಪಿ ವಿರುದ್ಧ ಅಸಮಧಾನ ಹೊರ ಹಾಕಿದ್ದು, ಒಳ ಸಂಚಿನಿಂದ ಶಾಸಕ ಯತ್ನಾಳ್ ಗೆ ವಿರೋಧ ಪಕ್ಷದ ನಾಯಕ ಸ್ಥಾನ ತಪ್ಪಿದೆ ಎಂದರು.