ನದಿಯಲ್ಲಿ ಮುಳುಗಿ ಬಾಲಕಿ ಸಾವು
ವಿಜಯಪುರ: ಕೃಷ್ಣಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಬಾಲಕಿಗೆ ಈಜಲು ಬಾರದೇ ಮುಳುಗಿ ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ನಡೆದಿದೆ. ಜಿಲ್ಲೆಯ ಸೋಮದೇವರಹಟ್ಟಿ ಗ್ರಾಮದ ಸ್ವಪ್ನ ಪವಾರ (15) ಮೃತಪಟ್ಟಿರುವ ಯುವತಿ. ಬಾಗಲಕೋಟೆಯ ಗದ್ದನಕೇರಿಯ ಜಾತ್ರೆಗೆ ಕುಟುಂಬದ ಜೊತೆಗೆ ತೆರಳಿ ಮರಳಿ ವಿಜಯಪುರಕ್ಕೆ ಬರುವಾಗ ಕೋಲ್ಹಾರದ ಕೃಷ್ಣಾ ನದಿಯ ದಡದಲ್ಲಿ ಸ್ನಾನಕ್ಕಾಗಿ ತೆರಳಿದ್ದಾರೆ. ಈಜು ಬಾರದೆ ಮುಳುಗಿ ಮೃತಪಟ್ಟಿದ್ದಾರೆ. ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.