ವಿಜಯಪುರ: ನಾನು ಆರೋಗ್ಯವಾಗಿ(Health) ಇದೇನಿ ಎಂದು ಕಾಂಗ್ರೆಸ್(Congress) ನಾಯಕಿ ವೀಣಾ ಕಾಶಪ್ಪನವರ ಹೇಳಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ನಿನ್ನೆ ನಡೆದ ಅಪಘಾತದಲ್ಲಿ(Accident) ಕೈಗೆ ಒಳಪೆಟ್ಟುಗಳಾಗಿವೆ. ಆದ್ರೇ, ಗಂಭೀರ ಗಾಯ ಆಗಿಲ್ಲ. ನಾನು ಇವತ್ತು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದೇನೆ. ಇನ್ನೂ ನಾನು ನಿಮ್ಮೆಲ್ಲರ ಸೇವೆ ಮಾಡಬೇಕಿದೆ. ನಿಮ್ಮೆಲ್ಲರ ಹಾರೈಕೆ ಆಶೀರ್ವಾದ ಇರಲಿ. ಯಾರು ಆಸ್ಪತ್ರೆ ಹತ್ತಿರ ಬರಬೇಡಿ ಎಂದು ಮನವಿ ಮಾಡಿದರು.