ವಿಜಯಪುರ: ತಾಯಿ ಹಾಗೂ ದೇವರ ಸಾಕ್ಷಿಯಾಗಿ ನಾವು ಬಿಜೆಪಿ ಚುನಾವಣೆ ಮಾಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ವಿಜಯಪುರ ನಗರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು, ಈ ಸಲದ ಲೋಕಸಭಾ ಚುನಾವಣೆಯಲ್ಲಿ ನಾವೇಲ್ಲ ಬಿಜೆಪಿ ಮಾಡುತ್ತೇವೆ. ನಾನು, ಶಾಸಕರಾದ ಸುನೀಲಕುಮಾರ್, ರಮೇಶ ಜಾರಕಿಹೊಳಿ, ಅರವಿಂದ ಬೆಲ್ಲದ್, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ವಿ. ಸೋಮಣ್ಣ ನಿರ್ಧಾರ ಮಾಡಿದ್ದೇವೆ. ಮೋದಿ ಅವರನ್ನು ಪ್ರಧಾನಿ ಮಾಡಲು ನಾವೇಲ್ಲ ಶ್ರಮಿಸುತ್ತೇವೆ ಎಂದರು. 2024ರಲ್ಲಿ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಿತ್ತೇವೆ. ಭಾರತ ಮತ್ತೊಂದು ಇಸ್ರೇಲ್ ಆಗಬಾರದು. ಭಯೋತ್ಪಾದಕ ರಾಷ್ಟ್ರ ಆಗಬಾರದು. ನಮ್ಮ ಸ್ವಾರ್ಥ ಬಿಟ್ಟು ನಮಗೆ ಅದು ಕೊಟ್ಟಿಲ್ಲ, ಇದು ಇಲ್ಲ ಎಂದು ಸ್ವಾರ್ಥ ಮಾಡಲ್ಲ. ಎಲ್ಲ ಅಡೆತಡೆಗಳನ್ನು ತೆಗೆದು ಮೋದಿ ಪ್ರಧಾನಿಯಾಗಲಿ ಎಂದು ನಾವೇಲ್ಲ ತೀರ್ಮಾನ ಮಾಡಿದ್ದೇವೆ ಎಂದರು. ವಿ. ಸೋಮಣ್ಣ 6 ನೇ ತಾರಿಖು ಡೆಡ್ ಲೈನ್ ನೀಡಿರುವ ವಿಚಾರಕ್ಕೆ ಸೋಮಣ್ಣ ಕಾಂಗ್ರೆಸ್ ಪಕ್ಷಕ್ಕೆ ಹೋಗ್ತಾರೆ ಅನ್ನೋದು ಸುಳ್ಳು. ಡಿಸೆಂಬರ್ 6 ವರಗೆ ಹೈ ಕಮಾಂಡ್ ಏನಾದ್ರು ಹೇಳಿರಬಹುದು. ನಿಮ್ಮ ಜೊತೆ ಚರ್ಚೆ ಮಾಡಬಹುದು ಎಂದು ಹೈಕಮಾಂಡ್ ಹೇಳಿರಬಹುದು. ಹೀಗಾಗಿ ಡಿಸೆಂಬರ್ 6 ಎಂದು ಸೋಮಣ್ಣ ಹೇಳಿರಬಹುದು ಎಂದು ಶಾಸಕ ಯತ್ನಾಳ್ ಹೇಳಿದರು. ಡಿಕೆಶಿ ವಿರುದ್ದ ಸಿಬಿಐ ತನಿಖೆಗೆ ತಡೆಗೆ ಸಚಿವ ಸಂಪುಟ ನಿರ್ಧಾರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,
ಈಗಾಗಲೇ ಶೇಕಡಾ 90 ರಷ್ಟು ಸಿಬಿಐ ತನಿಖೆಯಾಗಿದೆ. ಹಿಂದೆ ಕ್ಯಾಬಿನೆಟ್ ನಲ್ಲಿ ಮನಸ್ಸಿರಲಿಲ್ಲ.
ಆದರೂ ಕೇಂದ್ರ ಸರ್ಕಾರದ ಒತ್ತಾಯದ ಮೇಲೆ ಸಿಬಿಐ ತನಿಖೆಗೆ ಕೊಡೋ ನಿರ್ಣಯವಾಗಿತ್ತು. ನಂತರ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸ್ಕ್ವ್ಯಾಶ್ ಮಾಡಲಾಗಿತ್ತು. ಬಳಿಕ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಗೆ ಹೋಗಿತ್ತು. ಅದರ ಮೇಲಿನ ಸ್ಟೇ ಕೊಟ್ಟ ಬಳಿಕ ಸಿಬಿಐ ತಬಿಖೆ ಚುರುಕಾಗಿದೆ. ಈ ಪ್ರಕರಣದಲ್ಲಿ ಡಿಕೆಶಿ ವಾದ ಮಾಡಿದ್ದರೋ ಶಶಿಕಿರಣ ಶೆಟ್ಟಿ ಅವರೇ ಈಗಾ ಅಡ್ವೋಕೇಟ್ ಜನರಲ್ ಆಗಿದ್ದಾರೆ. ಅವರು ಬಂದ ಬಳಿಕ ಅವರೇ ಸರ್ಕಾರಿ ವಕೀಲರಾಗಿ ಕ್ಯಾಬಿನೆಟ್ ನಲ್ಲಿ ವಾಪಸ್ ತೆಗೆದುಕೊಳ್ಳಲು ಸಲಹೆ ನೀಡಿದ್ದಾರೆ. ಈ ಕುರಿತು ನಾನು ಟ್ವಿಟ್ ಮಾಡಿದ್ದೇನೆ. ಈ ನಿರ್ಧಾರವನ್ನು ವಾಪಸ್ ಪಡೆಯದಿದ್ದರೆ ನ್ಯಾಯಾಲಯದ ಮೊರೆ ಹೋಗುವೆ. ಅಲ್ಲದೇ, ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡುವೆ. ಭ್ರಷ್ಟಾಚಾರ ಪ್ರಕರಣಗಳಲ್ಲಿ ಯಾರ್ಯಾರು ಭಾಗಿಯಾಗಿದ್ದಾರೋ ಅವರಿಗೆ ಶಿಕ್ಷೆಯಾಗಬೇಕು. ತಮ್ಮ ಸರ್ಕಾರ ಇದೆ ಎಂದು ಬೇಕಾಬಿಟ್ಟಿಯಾಗಿ ನಿರ್ಧಾರ ತೆಗೆದುಕೊಳ್ಳೊದು ಅಧಿಕಾರ ಸರ್ಕಾರಕ್ಕಿಲ್ಲ ಎಂದು ಕಿಡಿಕಾರಿದರು. ನ್ಯಾಯವಾದಿಗಳ ಜೊತೆಗೆ ಚರ್ಚೆ ಮಾಡಿ ಮುಂದಿನ ನಡೆ ಇಡುವೆ ಎಂದರು.