ಚಿತ್ರದುರ್ಗ: ಊಟ ಹಾಗೂ ಮದ್ಯಕ್ಕಾಗಿ ತಾಯಿಯನ್ನೇ ಪಾಪಿ ಪುತ್ರ ಹತ್ಯೆಗೈದಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ರೊಪ್ಪ ಗ್ರಾಮದಲ್ಲಿ ನಡೆದಿದೆ.
ಚಾಕುವಿನಿಂದ ಚುಚ್ಚಿ ತಾಯಿ ಅಂಜಿನಮ್ಮ ( 58) ಪಾಪಿ ಪುತ್ರ ಶಿವಾರೆಡ್ಡಿ (35) ಕೊಲೆಗೈದಿದ್ದಾನೆ. ನಿತ್ಯ ಕುಡಿಯಲು ಹಣ ನೀಡುತ್ತಿಲ್ಲ. ಸರಿಯಾದ ಸಮಯಕ್ಕೆ ಊಟ ಹಾಕುತ್ತಿಲ್ಲ ಎಂದು ಹೆತ್ತ ತಾಯಿಯನ್ನೆ ಕೊಲೆ ಮಾಡಿದ್ದಾನೆ. ಇನ್ನು ಆರೋಪಿ ಶಿವಾರೆಡ್ಡಿಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ PSI ಮಹೇಶ್ ಹೊಸಪೇಟೆ ಭೇಟಿ ಮುಂದಿನ ಕಾನೂನು ಕ್ರಮಕೈಗೊಂಡಿದ್ದಾರೆ. ರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.