ವಿಜಯಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ನಗರ ವಾರ್ಷಿಕೋತ್ಸವದ ಅಂಗವಾಗಿ ಗುಮ್ಮಟನಗರಿ ಖ್ಯಾತಿಯ ವಿಜಯಪುರ ನಗರದಲ್ಲಿ ಆರ್ಎಸ್ಎಸ್ ಗಣವೇಷಧಾರಿಗಳ ಪಥಸಂಚಲನ ನಡೆಯಿತು. ನಗರದ ಸೆಟಲೈಟ್ ಬಸ್ ನಿಲ್ದಾಣದಿಂದ ಪಥ ಸಂಚಲನ ಆರಂಭಗೊಂಡು ವಾಟರ್ಟ್ಯಾಂಕ್ಸರ್ಕಲ್ವರೆಗೆ ಬಂದು ನಂತರ ಎರಡು ತಂಡಗಳಾಗಿ ವಿಭಜಿತಗೊಂಡು ಎರಡು ಮಾರ್ಗಗಳಲ್ಲಿ ಹೊರಟು ಅಲ್ಲಿಂದ ನಗರದ ಎಡ ಮತ್ತು ಬಲಭಾಗದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವೃತ್ತಗಳನ್ನು ಹಾಯ್ದು ಗಾಂಧಿವೃತ್ತದಲ್ಲಿ ಸಂಗಮಗೊಂಡು ಅಲ್ಲಿಂದ ಶ್ರೀ ಸಿದ್ದೇಶ್ವರ ದೇವಸ್ಥಾನದ ಮೂಲಕವಾಗಿ ಸಾಗುತ್ತಾ ದರ್ಬಾರ್ ಶಾಲಾ ಮೈದಾನದಲ್ಲಿ ಈ ಆರ್.ಎಸ್.ಎಸ್ ಗಣವೇಷಧಾರಿಗಳ ಪಥಸಂಚಲನ ಮುಕ್ತಾಯಗೊಂಡಿತು. ಪಥಸಂಚಲನ ಸಾಗುವ ಮಾರ್ಗದಲ್ಲಿ ರಂಗೋಲಿ, ಹೂವುಗಳನ್ನು ಗಣವೇಷಧಾರಿಗಳ ಮೇಲೆ ಸುರಿಸಿದರು. ಫಥಸಂಚಲನದ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.