ವಿಜಯಪುರ: ಪಾನ್ ಕಾರ್ಡ್ ಅಪ್ಡೇಟ್ ಮಾಡಬೇಕು ಎಂದು ಆನ್ಲೈನ್ ಮೂಲಕ ಲಕ್ಷಾಂತರ ಪಂಗನಾಮ ಹಾಕಿರುವ ಘಟನೆ ವಿಜಯಪುರ ಕೆಸಿ ನಗರದಲ್ಲಿ ನಡೆದಿದೆ.
ಮನೋವಿಜಯ ಬಸಪ್ಪ ಕಳಸಕೊಂಡ ಮೋಸ ಹೋಗಿರುವವರು. ಇನ್ನು ಆನ್ಲೈನ್ ಮೂಲಕ ನಿಮ್ಮ ಪಾನ್ ಕಾರ್ಡ್ ಅಪ್ಡೇಟ್ ಮಾಡಬೇಕೆಂದು ಮೇಸಜ್ ಕಳುಹಿಸಿದ್ದಾರೆ. ಅದನ್ನು ನಂಬಿ ಓಟಿಪಿ ನೀಡಿ ಅಪ್ಡೇಟ್ ಮಾಡಲು ಹೋದಾಗ ಖಾತೆಯಲ್ಲಿದ್ದ 2.74 ಲಕ್ಷ ಮೋಸ ಮಾಡಿದ್ದಾರೆ. ಇನ್ನು ಆನ್ಲೈನ್ ಮೋಸ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.