ವಿಜಯಪುರ: ಅಕ್ರಮವಾಗಿ(Illegal) ಪಡಿತರ ಅಕ್ಕಿ(Rice) ಸಾಗಾಟ ವೇಳೆ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ನಗರದ ಸೊಲ್ಲಾಪುರ(Sollapur) ರಸ್ತೆಯ ಹುಂಡೇಕರ ಪೆಟ್ರೋಲ್(Petrol) ಬಂಕ್ ಬಳಿ ನಡೆದಿದೆ. ರಾಹುಲ್ ಪವಾರ್, ನಾಗೇಶ ವಡ್ಡರ್ ಬಂಧಿತ ಆರೋಪಿಗಳು. ಇನ್ನು ಆರೋಪಿಗಳು ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟದ ವೇಳೆ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿಗೈದು 3 ಲಕ್ಷ 30 ಸಾವಿರ ಮೌಲ್ಯದ ಲಾರಿ, 82,620 ಮೌಲ್ಯದ 2430 ಕೆಜಿ ಅಕ್ಕಿ ಜಪ್ತಿಗೈದಿದ್ದಾರೆ. ಈ ಕುರಿತು ಆದರ್ಶನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.