ವಿಜಯಪುರ: ಭೀಕರ ಆಂಬ್ಯುಲೆನ್ಸ್ ಅಪಘಾತದಲ್ಲಿ ಗರ್ಭಿಣಿ ಮೃತಪಟ್ಟಿರುವ ಘಟನೆ ವಿಜಯಪುರ ನಗರದ ಮಾರ್ಗದಲ್ಲಿ ನಡೆದಿದೆ. ಭಾಗ್ಯಶ್ರೀ ಪರಣ್ಣನವರ ಮೃತಪಟ್ಟಿರುವ ಗರ್ಭಿಣಿ. ಗರ್ಭಿಣಿ ಭಾಗ್ಯಶ್ರೀ ಹೊಟ್ಟೆ ನೋವು ಆರಂಭವಾಗಿದೆ. ಈ ವೇಳೆ ಜಿಲ್ಲೆಯ ತಾಳಿಕೋಟಿಯಿಂದ ವಿಜಯಪುರ ಜಿಲ್ಲಾಸ್ಪತ್ರೆಗೆ ಆಂಬ್ಯುಲೆನ್ಸ್ ತೆರಳುವಾಗ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿ ಮಧ್ಯೆ ರಸ್ತೆ ಅಪಘಾತ ಆಗಿದೆ. ಈ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಗೆ ಬರುವಾಗ ನಗರದಲ್ಲಿ ಗರ್ಭಿಣಿ ಭಾಗ್ಯಶ್ರೀ ಅಸುನೀಗಿದ್ದಾಳೆ. ಇದೀಗ್ ಜಿಲ್ಲಾಸ್ಪತ್ರೆಯಲ್ಲಿ ಮೃತದೇಹವನ್ನು ಇಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನ ನೀಡಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.