ವಿಜಯಪುರ: ಮನೆಯ ಹೊರಗೆ ದಾಂಗುಡಿ ಇಡುತ್ತಿದ್ದ ಬೀದಿ ನಾಯಿಗಳು(Dog’s) ಇದೀಗ ಮನೆಯೊಳಗೆ ಹಾವಳಿ ಶುರು ಮಾಡಿವೆ. ನಾಲ್ಕೈದು ಶ್ವಾನಗಳು ಏಕಾಏಕಿ ಮನೆಗೆ ನುಗ್ಗಿ ಮನೆಯಲ್ಲಿದ್ದ ಬೆಕ್ಕನ್ನು(Cat) ಬೇಟೆಯಾಡಿರುವ ಘಟನೆ ವಿಜಯಪುರ ನಗರದ ಆಂಬೇಡ್ಕರ್ ಕಾಲೋನಿಯಲ್ಲಿ ನಡೆದಿದೆ. ಸುನೀಲ ಎಂಬುವವರು ಸಾಕಿದ್ದ ಬೆಕ್ಕು ಮನೆಯಲ್ಲಿ ಕುಳಿತಿದ್ದ ವೇಳೆ ಮನೆಯೊಳಗೆ ನುಗ್ಗಿದ ನಾಯಿಗಳು ಬೆಕ್ಕನ್ನು ಅಟ್ಟಾಡಿಸಿವೆ. ಬೆಕ್ಕನ್ನು ನಾಯಿಗಳು ತಿಂದುಹಾಕಿರುವ ದೃಶ್ಯ ಮನೆಯೊಳಗಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನು ಕಂಡು ಮನೆಯವರೆಲ್ಲ ಮಮ್ಮಲ ಮರುಗಿದ್ದಾರೆ.