ಚಿತ್ರದುರ್ಗ/Chitradurga: ಬೈಕ್ನಲ್ಲಿ(Bike) ಹಣ ತೆಗೆದುಕೊಂಡು ಹೋಗುತ್ತಿದ್ದಾಗ ಬೈಕ್ಗೆ ಅಡ್ಡಗಟ್ಟಿ 1 ಕೋಟಿ 50 ಲಕ್ಷ ದರೋಡೆಕೋರು(Robbery) ದರೋಡೆ ಮಾಡಿರುವ ಘಟನೆ ಚಿತ್ರದುರ್ಗದ ಈಚಲನಾಗೇನಹಳ್ಳಿ ಬಳಿ ನಡೆದಿದೆ. ಮಹಮದ್ ಇರ್ಫಾನುಲ್ಲಾ ಹಾಗೂ ಝಾಕೀರ್ ಇಬ್ಬರು ಬೈಕ್ನಲ್ಲಿ ಹಣ ತೆಗೆದುಕೊಂಡು ಹೋಗುತ್ತಿದ್ದರು.ಹೊಸಹಳ್ಳಿ ಗ್ರಾಮದ ಕಡೆಗೆ ಬೈಕ್..ನಲ್ಲಿ ಹೋಗುವಾಗ ಕಾರು ಅಡ್ಡ ಹಾಕಿ ಹಣ ದರೋಡೆ ಮಾಡಿದ್ದಾರೆ. ಇನ್ನು 5-6 ಮಂದಿ ಗ್ಯಾಂಗ್ ನಿಂದ ಮಾರಕಾಸ್ತ್ರ ತೋರಿಸಿ 1.5 ಕೋಟಿ ಹಣ(Money) ರಾಬರಿಗೈದು ಎಸ್ಕೇಪ್ ಆಗಿದ್ದಾರೆ. ಹೈದರಾಬಾದ್ ನಿಂದ ಹಣ ಬಸ್ಸಿನಲ್ಲಿ ತಂದು, ಊರಿಗೆ ಬೈಕ್ ನಲ್ಲಿ ಹೋಗುವಾಗ ದರೋಡೆ ಮಾಡಲಾಗಿದೆ. ಇನ್ನು ಹೈದರಾಬಾದ್ ನಲ್ಲಿ ಮಹಮದ್ ಸಮೀವುಲ್ಲಾ ಸ್ನೇಹಿತನ ಬಳಿಯಿಂದ ಹಣ ತಂದಿದ್ದರು. ಅಡಿಕೆ ವ್ಯಾಪಾರಕ್ಕೆ ಸಂಬಂಧಿಸಿದ ಹಣ ತೆಗೆದುಕೊಂಡು ಬರುವಾಗ ಕೃತ್ಯ ಆಗಿದೆ. ಸ್ಥಳಕ್ಕೆ ಚಿತ್ರದುರ್ಗದ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿ, ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.