ವಿಜಯಪುರ: (Bike) ಬೈಕ್ ನಲ್ಲಿಟ್ಟಿದ್ದ 2.5 ಲಕ್ಷ ಹಣ(Money) ಕಳ್ಳತನ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಇಜೇರಿ ಕಾಂಪ್ಲೆಕ್ಸ ಬಳಿ ನಡೆದಿದೆ. ನಿಡಗುಂದಿಯ ಹೆಬ್ಬಾಳ ಗ್ರಾಮದ ಹೊಳೆಬಸು ಸಿದ್ರಾಮಪ್ಪ ಹೋಗೋಡಿ ಹಣ ಕಳೆದುಕೊಂಡ ವ್ಯಕ್ತಿ. ಯೂನಿಯನ್(Union Bank) ಬ್ಯಾಂಕ್ ನಿಂದ 2.5 ಲಕ್ಷ ರೂ ಹಣ ತೆಗೆಸಿ, ಒಂದು ಪ್ಲಾಸ್ಟಿಕ್(Plastic) ಚೀಲದಲ್ಲಿ ಹಾಕಿಕೊಂಡು ಬಂದು ಬೈಕ್ನಲ್ಲಿಟ್ಟಿದ್ದರು. ಮೊಬೈಲ್(Mobile) ದುರಸ್ತಿಗಾಗಿ ಅಂಗಡಿಗೆ ತೆರಳಿದ್ದಾರೆ. ಈ ವೇಳೆ ಕಳ್ಳನೋರ್ವ ತನ್ನ ಕೈಚಳಕ ತೋರಿಸಿದ್ದಾನೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಿಡಗುಂದಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.