ವಿಜಯಪುರ: ಮಾದಿಗ ಮುನ್ನಡೆ ಮಾದಿಗರ ಆತ್ಮಗೌರವ ಸಮಾವೇಶ ಡಿಸೆಂಬರ್ 24ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಹೇಳಿದರು. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಸಾಯಿ ಗಾರ್ಡನ್ ಇಟಗಿ ಪೆಟ್ರೋಲ ಪಂಪ್ ಬಳಿ ಡಿಸೆಂಬರ್ 24ರಂದು ಬೆಳಗ್ಗೆ 10:30ಕ್ಕೆ ಕಾರ್ಯಕ್ರಮ ನಡೆಯಲಿದೆ. ಅಲ್ಲದೇ, ಒಳಮೀಸಲಾತಗಾಗಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಅದರ ಭಾಗವಾಗಿ ಮಾದಿಗ ಮುನ್ನಡೆ ಮಾದಿಗರ ಆತ್ಮಗೌರವ ಸಮಾವೇಶವೂ ಸ್ವಾಭಿಮಾನ ಸಂಕೇತವಾಗಿ ನಡೆಯಲಿದೆ. ಅಂದು ಬಸವಮೂರ್ತಿ ಮಾದರ ಚೆನ್ನಯ್ಯ ದಿವ್ಯ ಸಾನಿದ್ಯದಲ್ಲಿ ಕೇಂದ್ರ ಸಚಿವ ಎ ನಾರಾಯಣ ಸ್ವಾಮಿ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಶಾಸಕ ದುರ್ಯೋಧನ ಐಹೊಳೆ ಸೇರಿದಂತೆ ಗಣ್ಯರು ಭಾಗವಹಿಸುತ್ತಾರೆ. ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅಧ್ಯಕ್ಷತೆಯಲ್ಲಿ ಸಮಾವೇಶ ನಡೆಯಲಿದೆ. ಅದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಬೇಕು ಎಂದರು.