ವಿಜಯಪುರ: ಸಚಿವ ಜಮೀರ್ಅಹ್ಮದ ಜೊತೆಗೆ ಸೇರಿ ಸಿಎಂ ಸಿದ್ದರಾಮಯ್ಯ ಹಾದಿಬಿಟ್ಟಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ವಿಜಯಪುರ ನಗರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು, ಸಚಿವ ಜಮೀರ್ಅಹ್ಮದ್ ಸಿದ್ದರಾಮಯ್ಯರನ್ನು ಮುಗಿಸ್ತಾರೆ. ಇನ್ನು ಜಮೀರ್ ಅಹ್ಮದ್ ಜೊತೆ ಸೇರಿದವರು ಹಾದಿ ಬಿಡ್ತಾರೆ. ಹಿಂದೆ ಮಾಜಿ ಸಿಎಂ ಕುಮಾರಸ್ವಾಮಿ ಹಾದಿ ಬಿಟ್ಟಿದ್ದರು. ಈಗ ಸಿಎಂ ಸಿದ್ದರಾಮಯ್ಯ ಹಾದಿ ಬಿಟ್ಟಿದ್ದಾರೆ. ಇದೀಗ್ ಹಾದಿ ಬಿಟ್ಟಿದ್ದ ಕುಮಾರಸ್ವಾಮಿ ಹಾದಿಗೆ ಬಂದ್ರು, ಆದ್ರೆ ಸಿದ್ದರಾಮಯ್ಯ ಹಾದಿ ಬಿಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಹಾದಿ ಬಿಟ್ಟು ಮಕ್ಕಾಮದೀನಾ ಹೊರಟಿದ್ದಾರೆ. ಅದು ಫೈವ್ ಸ್ಟಾರ್ ವಿಮಾನ ಇದೆ ಎಂದರು. ರಾಮ ಮಂದಿರ ಉದ್ಘಾಟನೆಗೆ ಸೋನಿಯಾಗಾಂಧಿ ಬರ್ತಾರಾ? ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಹಿಂದೂಗಳ ಬಗ್ಗೆ ಕಳಕಳಿ ಇದ್ರೆ, ದೇಶದ ಬಗ್ಗೆ ಕಳಕಳಿ ಇದ್ರೆ ಸೋನಿಯಾ ಪಾಲ್ಗೊಳ್ಳಲಿ.
ಹಿಂದೂ ಓಟ್ ಬೇಕಿದ್ರೆ ಬರ್ತಾರೆ. ಸೋನಿಯಾ ರಾಮ ಮಂದಿರಕ್ಕೆ ಬರೋದು ಓಟಿಗಾಗಿಯೇ ಎಂದ ಯತ್ನಾಳ್ ವಾಗ್ದಾಳಿ ನಡೆಸಿದರು. ಅಲ್ಪಸಂಖ್ಯಾತರ ಓಟ್ ಬೇಕಿದ್ದರೆ ಮಕ್ಕಾ ಮದೀನಾಕೆ ಹೋಗಲಿ. 25 ಜನ ವಕೀಲರನ್ನ ರಾಮ ಮಂದಿರ ವಿರುದ್ಧ ಕಾಂಗ್ರೆಸ್ ಸೂಪ್ರೀಂ ಕೋರ್ಟ್ ನಲ್ಲಿ ನಿಲ್ಲಿಸಿತ್ತು. ಕಪೀಲ್ ಸಿಬಾಲ್ ಹಿಡಿದು 27 ವಕೀಲರು, ಕಾಂಗ್ರೆಸ್ ಸದಸ್ಯರು ರಾಮ ಮಂದಿರ ವಿರುದ್ಧ ನ್ಯಾಯ ಮಾಡಿದ್ದಾರೆ. ರಾಮ ಕಲ್ಪನೆ ಎಂದು ಕಾಂಗ್ರೆಸ್ ವಾದ ಮಾಡಿತ್ತು. ರಾಮ ಇದ್ದ ಎನ್ನಲು ದಾಖಲೆ ಇಲ್ಲ ಎಂದು ವಾದ ಮಾಡಿದ್ದರು. ಹಿಂದೂಗಳಲ್ಲಿ ವೈರಿಗಳಿಗು ಸ್ವಾಗತ ಮಾಡೋದು ಧರ್ಮ. ಅದಕ್ಕಾಗಿ ಸೋನಿಯಾ ಗಾಂಧಿಗೆ ಆಹ್ವಾನ ನೀಡಿದ್ದಾರೆ ಎಂದರು.