ವಿಜಯಪುರ: ನಿಶ್ಚಿತಾರ್ಥ ಹಾಳು ಮಾಡಿದಕ್ಕೆ ಯುವಕನ ಹತ್ಯೆ ಮಾಡಲಾಗಿದೆ ಎಂದು ಎಸ್ಪಿ ಋಷಿಕೇಶ್ ಸೋನವಾಣೆ ಹೇಳಿದರು. ವಿಜಯಪುರ ನಗರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು, ಅಯಾನ್ ಶೇಕ್ ಕೊಲೆ ಆಗಿರುವ ದುರ್ದೈವಿ. ಇನ್ನು ಕೊಲೆ ಆರೋಪಿ ಹುಸೇನ್ಸಾಬ್ ನಂದಿಹಾಳ ಬಂಧಿಸಲಾಗಿದೆ ಎಂದರು. ಅಲ್ಲದೇ, ಮೃತಪಟ್ಟಿರುವ ಅಯಾನ್ ಪುಣೆ ನಿವಾಸಿ ಆಗಿದ್ದಾನೆ. ಆದ್ರೇ, ಹುಸೇನ್ಸಾಬ್ ನಿಶ್ಚಿತಾರ್ಥವನ್ನು ಅಯಾನ್ ಹಾಳು ಮಾಡಿದ್ದಾನೆ ಎಂದು ಆತನನ್ನು ಕೊಲೆ ಮಾಡಿದ್ದಾನೆ. ಅದಕ್ಕಾಗಿ ಕೊಲೆ ಆರೋಪಿ ಹುಸೇನ್ಸಾಬ್ನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.