ವಿಜಯಪುರ: ಕೋವಿಡ್ನಲ್ಲಿ ಅವ್ಯವಹಾರ ಆಗಿದೆ. ಅದಕ್ಕಾಗಿ ಖಂಡಿತವಾಗಿಯೂ ಈ ಬಗ್ಗೆ ತನಿಖೆ ಆಗುತ್ತದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ವಿಜಯಪುರ ನಗರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಸಿಎಂ ಇದ್ದಾಗ 40ಸಾವಿರ ಕೋಟಿ ಕೋವಿಡ್ ಹಗರಣದ ಬಗ್ಗೆ ಶಾಸಕ ಯತ್ನಾಳ್ ಹೇಳಿದ್ದಾರೆ. ನಾವು ಮುಂಚೆಯಿಂದಲೂ ಕೋವಿಡ್ ನಲ್ಲಿ ಅವ್ಯವಹಾರ ಆಗಿದೆ ಅಂತ ಹೇಳಿಕೊಂಡೆ ಬಂದ್ದೀವಿ. ಇದು ಹೊಸದೇನಲ್ಲ. ಇನ್ನು ಯತ್ನಾಳ್ ಅವರು ಅದಕ್ಕೆ ಸೀಲ್ ಹೊಡೆದಿದ್ದಾರೆ. ಚುನಾವಣೆ ಮುನ್ನವೇ ನಾವು ಕೋವಿಡ್ ಹಗರಣ ತನಿಖೆ ಮಾಡ್ತೀವಿ ಅಂದಿದ್ದೇವೆ. ಅದಕ್ಕೆ ಪುಷ್ಠಿ ಸಿಕ್ಕಿದೆ. ಖಂಡಿತವಾಗಿಯೂ ತನಿಖೆ ಮಾಡ್ತೀವಿ ಎಂದರು.