ವಿಜಯಪುರ: ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ನಮ್ಮಲ್ಲಿ ಅಂಥದ್ದು ಏನು ನಡೆಯೋದಿಲ್ಲ. ರಾಜ್ಯ ಸರ್ಕಾರ ಎಲ್ಲ ಕ್ರಮ ಕೈಗೊಳ್ಳುತ್ತದೆ ಎಂದು ಸಚಿವ ಎಂಬಿ ಪಾಟೀಲ ಹೇಳಿದರು. ವಿಜಯಪುರ ನಗರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು,
ಗೋದ್ರಾ ರೀತಿಯ ಗಲಭೆ ಮರುಕಳಿಸಬಹುದು ಎಂಬ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯಿಸಿದರು. ಅಲ್ಲದೇ, ಕೇಂದ್ರ ಸರ್ಕಾರ, ರೈಲ್ವೇ ಇಲಾಖೆಯ ಸಹಾಯ ತೆಗೆದುಕೊಳ್ತೇವೆ. ಗೋದ್ರಾ ಆಗಲಿ, ಮತ್ತೊಂದಾಗಲಿ ಆಗಲು ನಾವು ಬಿಡೋದಿಲ್ಲ. ಕರಸೇವಕರಲ್ಲಿ ಎಲ್ಲರೂ ಇದ್ದಾರೆ, ಎಲ್ಲ ಧರ್ಮ, ಎಲ್ಲ ಪಕ್ಷದವರು ಇದ್ದಾರೆ. ಅದಕ್ಕೆ ಅವಕಾಶ ಕೊಡೊದಿಲ್ಲ. ಯಾರು ಕೂಡ ಅಂತಹದ್ದು ಮಾಡೋದಿಲ್ಲ ಎಂದರು. ಇನ್ನು ಸಿಎಂ, ಸಚಿವರು, ಶಾಸಕರು ಇದಕ್ಕೆ ಆಸ್ಪದ ಕೊಡುವುದಿಲ್ಲ. ಬಿ ಕೆ ಹರಿಪ್ರಸಾದ್ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ.
ಅದು ಅವರ ವೈಯಕ್ತಿಕ ಹೇಳಿಕೆ ಆಗಿದೆ. ನಮ್ಮ ಸರ್ಕಾರದಲ್ಲಿ ನಾವಿದ್ದೇವೆ. ನಮ್ಮ ರಾಜ್ಯ ಶಾಂತಿಯ ತೋಟ. ನಮಗೆ ರಾಮನು ಬೇಕು, ಶಿವನು ಬೇಕು ಹಾಗೇ ಎಲ್ಲರನ್ನೂ ಎಲ್ಲ ಧರ್ಮಗಳಿಗೆ ಮರ್ಯಾದೆ ಕೊಡೊದು ನಮ್ಮ ಸಂಸ್ಕ್ರತಿ. ರಾಮನನ್ನು ಎಲ್ಲರೂ ಗೌರವಿಸುತ್ತಾರೆ, ಶಿವನನ್ನು ಎಲ್ಲರೂ ಗೌರವಿಸುತ್ತಾರೆ ಎಂದರು.