ವಿಜಯಪುರ: ಮಾಜಿ ಶಾಸಕ ಎ ಎಸ್ ಪಾಟೀಲ ನಡಹಳ್ಳಿ ವಿರುದ್ಧ ಜಿಲ್ಲಾ ಪಂಚಮಸಾಲಿ ಮುಖಂಡರು ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ರವಿವಾರ ಪ್ರತಿಭಟನೆ ನಡೆಸಿದರು. ಕೂಡಲಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಜಯಮೃತ್ಯುಂಜಯ ಸ್ವಾಮಿಜೀ ಅವರು ಸ್ವಾಮಿಜೀ ಅಲ್ಲ ಎಂದು ನಡಹಳ್ಳಿ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ, ಪಂಚಮಸಾಲಿ ಮುಖಂಡರು ನಡಹಳ್ಳಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ನಡಹಳ್ಳಿ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಕಿಡಿಕಾರಿದರು. ತಕ್ಷಣವೇ ನಡಹಳ್ಳಿ ಕ್ಷಮೆ ಕೇಳುವಂತೆ ಪಂಚಮಸಾಲಿ ಮುಖಂಡರು ಒತ್ತಾಯಿಸಿದರು.