ವಿಜಯಪುರ: ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ದಾ ಭೇಟಿಯ ಬಗ್ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯ ಭೇಟಿ ಫಲಪ್ರದವಾಗಿದೆ. ದೆಹಲಿಗೆ ಬರಲು ರಾಷ್ಟ್ರೀಯ ಅಧ್ಯಕ್ಷರಿಂದ ನನಗೆ ಕರೆ ಬಂದಿದ್ದ ಕಾರಣ ಹೋಗಿದೆ. ರಾಷ್ಟ್ರೀಯ ಅಧ್ಯಕ್ಷರ ಭೇಟಿಗೂ ಮುನ್ನ ಅರುಣಸಿಂಗ್ ಹಾಗೂ ರಾಧಾಮೋಹನ್ ಅಗರವಾಲ್ ಅವರನ್ನು ಭೇಟಿ ಮಾಡಲು ತಿಳಿಸಿದ್ದರು. ಅವರಿಬ್ಬರ ಬಳಿ ಮಾತನಾಡಿದ ಮಾಹಿತಿಯನ್ನು ತಿಳಿದುಕೊಂಡ ಬಳಿಕ ಅಮಿತ್ ಶಾ ಹಾಗೂ ನಡ್ಡಾ ಅವರು ನನ್ನ ಭೇಟಿ ಮಾಡಿದರು ಎಂದರು.
25 ನಿಮಿಷಗಳ ಕಾಲ ಸುದೀರ್ಘ ಮಾತುಕತೆ ನಡೆಯಿತು. ಎಲ್ಲಾ ವಿಚಾರಗಳನ್ನ ಕೇಂದ್ರದ ನಾಯಕರ ಮುಂದೆ ಹೇಳಿದ್ದೇನೆ.
ಎಲ್ಲವನ್ನೂ ಮುಂದಿನ ದಿನಗಳಲ್ಲಿ ಸರಿಪಡಿಸುವುದಾಗಿ ಕೇಂದ್ರದ ನಾಯಕರು ಭರವಸೆ ನೀಡಿದ್ದಾರೆ. ಏನಾದರೂ ಹೇಳುವುದಿದ್ದರೆ ನನಗೆ ನೇರವಾಗಿ ಹೇಳಿ ಎಂದು ನಡ್ಡಾ ಹೇಳಿದ್ದಾರೆ. ಎರಡು ದಿನ ಮುಂಚಿತವಾಗಿ ಮಾಹಿತಿ ನೀಡಿ ನಾನು ಭೇಟಿಯಾಗಲು ಸಮಯ ನೀಡುವೆ ಎಂದು ಹೇಳಿದ್ದಾರೆ. ಈ ವೇಳೆ ನಿಮ್ಮ ಅಪಾರ್ಟ್ಮೆಂಟ್ ಸಿಗಲ್ಲ. ಯಡಿಯೂರಪ್ಪ, ವಿಜಯೇಂದ್ರಗೆ ಮಾತ್ರ ಸಿಗುತ್ತದೆ ಎಂದು ನಡ್ಡಾ ಅವರಿಗೆ ನಾನು ಮನವಿ ಮಾಡಿಕೊಂಡೆ.
ಎರಡು ದಿನದಲ್ಲೇ ಭೇಟಿಗೆ ಅವಕಾಶ ನೀಡುತ್ತೇನೆ ಎಂದಿದ್ದಾರೆ. ಏನೇ ಇದ್ದರೂ ನಮಗೆ ತಿಳಿಸಬೇಕು. ಯಾರ ಮುಲಾಜಿ ಇಲ್ಲದೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ನನಗೆ ಯಾವುದೇ ನೋಟಿಸ್ ಇಲ್ಲ ಎಚ್ಚರಿಕೆ ಇಲ್ಲ. ನನ್ನ ಜೊತೆ ಇಬ್ಬರು ನಾಯಕರು ಗೌರವಯುತವಾಗಿ ನಡೆದುಕೊಂಡಿದ್ದಾರೆ. ಕೊರೋನಾ ಮಹಾಮಾರಿ ವೇಳೆ 40, 000 ಕೋಟಿ ಭ್ರಷ್ಟಾಚಾರ ಇದೆ ಎಂಬ ಯತ್ನಾಳ್ ಆರೋಪ ಪ್ರಸ್ತಾಪ ವಿಚಾರಕ್ಕೆ ಎಲ್ಲವನ್ನು ಪ್ರಸ್ತಾಪ ಮಾಡಿದ್ದೇನೆ. ಇಲ್ಲಿ ಎಲ್ಲವನ್ನೂ ಹೇಳಲಾಗಲ್ಲ. ಇಲ್ಲಿ ಏನೆಲ್ಲ ಮಾಹಿತಿ ನೀಡಬೇಕೆಂದು ಹೇಳಿದ್ದಾರೆ ನಾನು ಮಾಹಿತಿ ಕೊಡುವೆ ಎಂದರು. ರಾಜ್ಯ ಬಿಜೆಪಿ ಉಸ್ತುವಾರಿ ಬದಲಾವಣೆ ವಿಚಾರ
ಈ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಅದೆಲ್ಲಾ ಹೈಕಮಾಂಡ್ ನಿರ್ಣಯ. ಬದಲಾವಣೆ ಯಾರು ಮಾಡುತ್ತಾರೆ ಗೊತ್ತಿಲ್ಲ. ಕೇಂದ್ರ ವರಿಷ್ಠ ಮಂಡಳಿಗೆ ಏನು ಮಾಹಿತಿ ಇರುತ್ತದೆಯೋ ಆ ಆಧಾರದ ಮೇಲೆ ಬದಲಾವಣೆ ಮಾಡುತ್ತಾರೆ. ನಾನು ಬದಲಾವಣೆ ಆಗಲಿ ಎಂದು ಹೇಳಿದರು ಆಗಲ್ಲ ಬದಲಾವಣೆ ಮಾಡಬೇಡಿ ಎಂದರು ಆಗಲ್ಲ.
ವಿಜಯಪುರ ನಗರದಲ್ಲಿ ಧರ್ಮ ದಂಗಲ್ ವಿಚಾರಕ್ಕೆ ಸಿದ್ದೇಶ್ವರ ಜಾತ್ರೆಯಲ್ಲಿ ಅನ್ಯ ಕೋಮಿನವರಿಗೆ ವ್ಯಾಪಾರ ವಹಿವಾಟಿಹೆ ಅವಕಾಶ ನೀಡಬಾರದು ಎಂದು ಹಿಂದು ಸಂಘಟನೆಗಳ ಒಕ್ಕೂಟ ಆಗ್ರಹಕ್ಕೆ ಹಿಂದೂಪರ ಸಂಘಟನೆಗಳ ಒಕ್ಕೂಟಗಳಿಗೆ ನೂರು ಅಂಗಡಿಯ ನೀಡುವುದಾಗಿ ಜಾತ್ರಾ ಉತ್ಸವ ಸಮಿತಿ ಹೇಳಿದೆ. ಜಾತ್ರೆಯಲ್ಲಿ ಅಂಗಡಿಆದ್ಯತೆ ನೀಡಲಾಗುತ್ತದೆ. ಹಿಂದೂಗಳು ತೆಗೆದುಕೊಂಡ ಬಳಿಕ ಉಳಿದರೆ ಇತರರಿಗೆ ನೀಡಲಾಗುತ್ತದೆ.
ರಾಮಂದಿರ ಉದ್ಘಾಟನೆ ವಿಚಾರದಲ್ಲಿ ಮತ್ತೊಂದು ಗೋದ್ರಾ ಆಗಬಹುದು ಎಂಬ ಹರಿಪ್ರಸಾದ್ ಹೇಳಿಕೆ, ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಮತ್ತೊಂದು ಗೋದ್ರಾ ಮಾಡಲು ಸಂಚು ಮಾಡುತ್ತಿದೆ. ಇದನ್ನು ತಮ್ಮ ಹೇಳಿಕೆಯ ಮೂಲಕ ಬಿಕೆ ಹರಿಪ್ರಸಾದ ಬಹಿರಂಗಪಡಿಸಿದ್ದಾರೆ.
ಕಾರಣ ಹರಿಪ್ರಸಾದ್ ಅವರನ್ನು ಕೂಡಲೇ ತನಿಖೆಗೆ ಒಳಪಡಿಸಬೇಕು. ರಾಜ್ಯ ಸರ್ಕಾರ ಹರಿಪ್ರಸಾದ್ ಮೇಲೆ ಕೇಸ್ ದಾಖಲಿಸಿ, ಏನು ಮಾಹಿತಿ ಇದೆ ಎಂಬುದನ್ನ ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ರಾಮಮಂದಿರ ಉದ್ಘಾಟನೆಯ ದಿನ ರಾಜ್ಯದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಚಿವ ರಾಮಲಿಂಗಾರೆಡ್ಡಿ ಆದೇಶ ಕುರಿತು ಯತ್ನಾಳ ಸ್ವಾಗತಿಸಿದರು. ಧಾರ್ಮಿಕ ದತ್ತಿ ಸಚಿವರ ನಿರ್ಧಾರವನ್ನು ನಾನು ಸ್ವಾಗತಿಸುವೆ. ಅವರಿಗೆ ಅಭಿನಂದನೆ ಸಲ್ಲಿಸುವೆ.
ನಾವೆಲ್ಲ ರಾಮಭಕ್ತರು. ನಮ್ಮ ದೇಶದ ಮೂಲಪುರುಷ ಶ್ರೀ ರಾಮ ಎಂದರು.