ವಿಜಯಪುರ: ಸೈಕಲ್ಗೆ ಕಾರು ಡಿಕ್ಕಿಯಾಗಿರುವ ಪರಿಣಾಮ ಸೈಕಲ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಜಯಪುರ ನಗರದ ಗಾಂಧಿಚೌಕ್ ಸರ್ಕಲ್ನಲ್ಲಿ ಬುಧವಾರ ನಡೆದಿದೆ. KA 28 Z 2707 ಕಾರು ಬೈಕ್ಗೆ ಡಿಕ್ಕಿಯಾಗಿದೆ. ಅಲ್ಲದೇ, ಸೈಕಲ್ ಸಂಪೂರ್ಣವಾಗಿ ಜಖಂಗೊಂಡಿದೆ. ಗಾಯಾಳು ಸೈಕಲ್ ಸವಾರ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಕಾರು ಚಾಲಕ ಕಾರು ಸ್ಥಳದಲ್ಲಿಯೇ ಬಿಟ್ಟು ಎಸ್ಕೇಪ್ ಆಗಿದ್ದಾನೆ. ವಿಜಯಪುರ ಸಂಚಾರಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.