ವಿಜಯಪುರ: 110 ವರ್ಷ ಬದುಕಿದ್ದ ಶತಾಯುಷಿ ಅಜ್ಜಿ ನಿಧನರಾದರು. ವಿಜಯಪುರದ 110 ವರ್ಷದ ಭಾಗವ್ವ ಕೋಲ್ಹಾರ ಅಗಲಿದ್ದಾರೆ. ವಿಜಯಪುರ ನಗರದ ಇಬ್ರಾಹಿಂಪುರ ಏರಿಯಾ ನಿವಾಸಿ ಭಾಗವ್ವ ಕೋಲ್ಹಾರ 110 ವರ್ಷ ಜೀವಿಸಿದ್ದಾರೆ. 1913 ಜನೇವರಿ 1ರಂದು ಜನಿಸಿದ್ದ ಭಾಗವ್ವ 110 ವರ್ಷ ಜೀವಿಸಿದ್ದಾರೆ. ಕೆಲ ದಿನಗಳಿಂದ ವಯೋ ಸಹಜ ಅನಾರೋಗ್ಯಕ್ಕೆ ಅಜ್ಜಿ ಭಾಗವ್ವ ಒಳಗಾಗಿದ್ದರು. ಒಟ್ಟು 12 ಜನ ಮಕ್ಕಳು, 30 ಜನ ಮೊಮ್ಮಕ್ಕಳು, 17 ಜನ ಮರಿ ಮೊಮ್ಮಕ್ಕಳನ್ನು ಬಿಟ್ಟು
ಶತಾಯುಷಿ ಅಜ್ಜಿ ಅಗಲಿಕೆಯಿಂದ ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟಿದೆ.