ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ಮೇಯರ್ ಬಳಕೆ ಮಾಡುವ ವಾಹನದ ನಾಮಫಲಕದಲ್ಲಿ ಯಡವಟ್ಟು ಮಾಡಲಾಗಿದೆ. ಕಳೆದ ಜನೇವರಿ 9 ರಂದು ಪಾಲಿಕೆ ಮೇಯರ್ ಆಗಿ ಆಯ್ಕೆಯಾಗಿರುವ ಮಾಹೇಜಬೀನ್ ಹೊರ್ತಿ ಸರ್ಕಾರಿಂದ ನೀಡಲಾಗಿರುವ ವಾಹನಕ್ಕೆ ಪೂಜ್ಯ ಮಹಾಪೌರರು ಎಂದು ನಮೂದು ಮಾಡಲಾಗಿದೆ. ಕಾನೂನು ಪ್ರಕಾರ ಮಹಾಪೌರರು ಎಂದಷ್ಟೇ ಬರೆಸಬೇಕಿದೆ. ಉಳಿದಂತೆ ಇತರೆ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯಲ್ಲಿ ಪೂಜ್ಯ ಮಹಾಪೌರರು ಎಂದು ನಮೂದಿಸಬಹುದು. ಆದರೆ ಮೇಯರ್ ಅವರಿಗೆ ನೀಡಲಾಗಿರುವ ವಾಹನದ ಬೋರ್ಡ್ ನಲ್ಲಿ ಪೂಜ್ಯ ಮಹಾಪೌರರು ಎಂದು ಬರೆಸಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಪಾಲಿಕೆಯ ಆಯುಕ್ತರು, ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.