ವಿಜಯಪುರ: ಆಕಸ್ಮಿಕವಾಗಿ ಶಾರ್ಟ್ ಸರ್ಕ್ಯೂಟ್ನಿಂದ ಬ್ಯಾಂಕ್ನಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ವಿಜಯಪುರ ನಗರದ ಗಣಪತಿ ಚೌಕ್ನಲ್ಲಿ ನಡೆದಿದೆ. ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್ ನಿಯಮಿತದಲ್ಲಿ ಬೆಂಕಿ ಅವಘಡದಿಂದ ಕಡತಗಳು ಭಸ್ಮವಾಗಿವೆ. ಹಳೆಯ ಹಾಗೂ ಹೊಸ ಕಡತಗಳು ಸುಟ್ಟು ಹೋಗಿದ್ದಾವೆ. ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿಗಳು ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
![](https://karnataka1news.com/wp-content/uploads/2023/12/IMG-20231227-WA0126-1-1024x1024.jpg)