ವಿಜಯಪುರ: ಒಂದು ಲಕ್ಷ ಹಣಕ್ಕೆ ಮೂರು ಪಟ್ಟು ಹಣ ನೀಡುವುದಾಗಿ ವಂಚನೆ ಮಾಡಿರುವ ಘಟನೆ ವಿಜಯಪುರ ನಗರದ ಕಮಾನಖಾನ್ ಬಜಾರನಲ್ಲಿ ನಡೆದಿದೆ. ಬೆಳಗಾವಿ ಮೂಲದ ನವಾಜ್ ಜಗದಾಳ, ನಯುಮ್ ಪೀರಜಾದೆ, ನಾಜೀಯಾ ಶಿವಪೂರ ವಂಚನೆ ಮಾಡಿದ್ದಾರೆ. ಇನ್ನೂ ಒಂದು ಲಕ್ಷ ವೈಟ್ ಹಣಕ್ಕೆ ಮೂರು ಪಟ್ಟು ಬ್ಲ್ಯಾಕ್ ಹಣ ನೀಡುವುದಾಗಿ 7 ಲಕ್ಷ ವೈಟ್ ಹಣ ಪಡೆದುಕೊಂಡು ಮೋಸಗೈದಿದ್ದಾರೆ. ಅಲ್ಲದೇ, 21 ಲಕ್ಷದ ಕಲರ್ ಪೇಪರ್ ನೀಡಿ ಮೋಸ ಮಾಡಿದ್ದಾರೆ. ಈ ಕುರಿತು ಗೋಳಗುಮ್ಮಟ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.