ವಿಜಯಪುರ: ಐತಿಹಾಸಿಕ ಗುಮ್ಮಟನಗರಿಯಲ್ಲಿ ಮನೆಗಳ್ಳತನ ಪ್ರಕರಣದಲ್ಲಿ ನಾಲ್ವರು ಆರೋಪಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಋಷಿಕೇಸ್ ಸೋನವಾಣೆ ಹೇಳಿದರು. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 12 ಲಕ್ಷ 17 ಸಾವಿರ ಮೌಲ್ಯದ 210 ಗ್ರಾಮ ತೂಕದ ಚಿನ್ನಾಭರಣ, 20 ಗ್ರಾಮ ಬೆಳ್ಳಿ, ಎಲ್ಇಡಿ ಟಿವಿ, ಎರಡು ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ಜಮೀರ ಖಾನ್, ಅನ್ವರ ಶೇಖ್, ಆಸೀಫ್ ಹವಾಲ್ದಾರ್, ಸನ್ಮಾನ ಖಾನ ಬಂಧಿತ ಆರೋಪಿಗಳು. ನಗರದ ಮದೀನಾನಗರದಲ್ಲಿ 4 ಮನೆಗಳ್ಳತನ ಕೃತ್ಯಗಳನ್ನು ಮಾಡಿರುವ ಬಗ್ಗೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಅಲ್ಲದೇ, ಮೂರು ಗಾಂಧಿಚೌಕ್ ಹಾಗೂ ಒಂದು ಜಲನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು. ಅಲ್ಲದೇ, ಮತ್ತೊಂದೆಡೆ ನಗರದ ಝಂಡಾ ಕಟ್ಟಾ ಹಳಕೇರಿ ಗಲ್ಲಿಯ ಸಮೀರ ಇನಾಂದಾರನ್ನು ಬಂಧಿಸಿ 2.70 ಲಕ್ಷ ಮೌಲ್ಯದ 50 ಗ್ರಾಂ ಚಿನ್ನ ಜಪ್ತಿಗೈದಿದ್ದಾರೆ. ಇನ್ನು ನಗರದ ಸದ್ಗುರು ಜ್ಯುವೇಲರಿ ಶಾಪನಲ್ಲಿ 80 ಸಾವಿರ ಮೌಲ್ಯದ 15 ಗ್ರಾಂ ಚಿನ್ನ ಹಾಗೂ ಮಹಾರಾಷ್ಟ್ರದ ಅಕ್ಕಲಕೋಟ ತಾಲೂಕಿನ ಬ್ಯಾಗಳಿಯ ಆರೋಪಿ ಲಲಿತಾ @ ಶಾಂತಾಬಾಯಿ ಗಾಯಕವಾಡ ಬಂಧಿತರು. ಇರಾನಿ ಕಾಲೋನಿ ನಿವಾಸಿ ಗೌಸಮೋದ್ದಿನ ಮಕಾನದಾರ, ಆಸಾರಗಲ್ಲಿ ನಿವಾಸಿ ಸಾಬೀರ ಬಗಲಿ ಬಂಧಿಸಿ 1.20 ಲಕ್ಷ ಮೌಲ್ಯದ 3 ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.