ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ ಆಗಿದೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದ ಸುತ್ತಮುತ್ತ ರಿಕ್ಟರ್ ಮಾಪಕದಲ್ಲಿ 2.6 ಮ್ಯಾಟಿಟ್ಯೂಡ್ ಭೂಕಂಪನ ದಾಖಲು ಆಗಿದೆ. ಇನ್ನು ರಾತ್ರಿ 8:40ಕ್ಕೆ ಭೂಕಂಪನವಾಗಿದೆ ಎಂದು KSNDMC ವರದಿ ಆಧರಿಸಿ ವಿಜಯಪುರ ಜಿಲ್ಲಾಡಳಿತ ಖಚಿತಪಡಿಸಿದೆ. ಭೂಮಿಯಿಂದ 5ಕಿ.ಮೀ ಆಳದಲ್ಲಿ 2. 6 ಮ್ಯಾಟಿಟ್ಯೂಡ್ ಭೂಕಂಪನ ದಾಖಲು ಆಗಿದೆ. ಕಳೆದ ಎರಡು ವರ್ಷದಲ್ಲಿ ಹಲವಾರು ಬಾರಿ ಜಿಲ್ಲೆಯಲ್ಲಿ ಭೂಕಂಪನ ಆಗಿದೆ. ಇದರಿಂದ ಜಿಲ್ಲೆಯ ಜನತೆಗೆ ಭಯದ ವಾತಾವರಣ ನಿರ್ಮಾಣವಾಗಿದೆ.