ವಿಜಯಪುರ: ಪ್ರಿನ್ಸಿಪಾಲ್ಗಾಗಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಡಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರು ನಡೆದಿದೆ. ಪ್ರಿನ್ಸಿಪಾಲ್ ಸಚಿನ ಪಾಟೀಲ ಬೇಕೆ ಬೇಕು ಎಂದು ವಿದ್ಯಾರ್ಥಿಗಳು ಘೋಷಣೆ ಕೂಗಿದರು. ಸಚಿನ ಪಾಟೀಲ ಸ್ಥಾನ ಬೇರೆ ಅವರನ್ನು ತರಲಾಗುತ್ತಿದೆ. ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಿಂದಿನ ಪ್ರಿನ್ಸಿಪಾಲ್ ಸಚಿನ ಪಾಟೀಲರನ್ನು ಮುಂದುವರೆಸಬೇಕು. ಬಡ ವಿದ್ಯಾರ್ಥಿಗಳು, ಕಾಲೇಜಿನ ಅಭಿವೃದ್ಧಿಗಾಗಿ ಪಾಟೀಲ ಅವರು ಕೆಲಸ ಮಾಡಿದ್ದಾರೆ. ಅದಕ್ಕಾಗಿ ನಮ್ಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.