ವಿಜಯಪುರ: ಒಂದೆ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳು ಸಮಸ್ಯೆ ಆಗಿರುವ ಘಟನೆ ವಿಜಯಪುರದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ನಡೆದಿದೆ. ಅಮಾನತ್ತಾಗಿದ್ದ ಡಿಡಿಪಿಐ ಎನ್ ಎಚ್ ನಾಗೂರು ಹಾಗೂ ಪ್ರಭಾರಿ ಡಿಡಿಪಿಐ ಉಮಾದೇವಿ ಸೊನ್ನವರ ಮಧ್ಯೆ ಡಿಡಿಪಿಐ ಕುರ್ಚಿಗಾಗಿ ಸಮರ ಆಗಿದೆ.
ಕಳೆದ ಜನೇವರಿ 30 ರಂದು ಹಣಕಾಸು ದುರುಪಯೋಗದ ಆರೋಪದ ಮೇಲೆ ಎನ್ ಎಚ್ ನಾಗೂರು ಅಮಾನತು ಆಗಿದ್ದರು. ಈ ಮಧ್ಯೆ ಅಮಾನತ್ತು ಪ್ರಶ್ನಿಸಿ ಕಲಬುರಗಿಯ ಕೆಎಟಿಗೆ ಹೋಗಿದ್ದ ಹಿಂದಿನ ಡಿಡಿಪಿಐ ಎನ್ ಎಚ್ ನಾಗೂರ ರಾಜ್ಯ ಆಡಳಿತ ನ್ಯಾಯ ಮಂಡಳಿ ಕಲಬುರಗಿ ಪೀಠದಿಂದ ಫೆಬ್ರವರಿ 7 ರಂದು ತಡೆಯಾಜ್ಞೆ ನೀಡಿದೆ. ಇದರಿಂದ ಇಬ್ಬರ ಅಧಿಕಾರದ ಕಿತ್ತಾಟದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳಿಗೆ ಸಮಸ್ಯೆ ಎದುರಿಸುವಂತೆ ಆಗಿದೆ.