ವಿಜಯಪುರ: ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಬಾಯ್ಲರ್ ಯಂತ್ರೋಪಕರಣಗಳ ಟೆಂಡರ್ ನಲ್ಲಿ ಅವ್ಯವಹಾರ ಹಿನ್ನೆಲೆ ಮಾಜಿ ಅಧ್ಯಕ್ಷ ಶಶಿಕಾಂತ ಗೌಡ ಪಾಟೀಲ್ ಸೇರಿ ಐವರ ವಿರುದ್ಧ ದೂರು ದಾಖಲಾಗಿದೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಮರು ಟೆಂಡರ್ನಲ್ಲಿ ಅವ್ಯವಹಾರಕ್ಕಾಗಿ
ಪ್ರಭಾರಿ ಕಾರ್ಯದರ್ಶಿ ಮಹಾದೇವಪ್ಪ ಶೆಟ್ಟಿ ಕೇಸ್ ನೀಡಿದ್ದಾರೆ. ಕಾರ್ಖಾನೆ ನಿರ್ದೇಶಕ ಗೌಡಪ್ಪ ಕೋಣಪ್ಪನವರ ,ನಿವೃತ್ತ ಉಪನಿಬಂಧಕ ಪಿಬಿ ಕಾಳಗಿ, ಮಾಜಿ ಪ್ರಧಾನ ವ್ಯವಸ್ಥಾಪಕ ಅಪ್ಪಾಸಾಹೇಬ ಪಾಟೀಲ್, ಮಾಜಿ ಪ್ರಧಾನ ವ್ಯವಸ್ಥಾಪಕ ಸಂಜೀವಕುಮಾರ ವಿರುದ್ಧ ದೂರು ದಾಖಲಾಗಿದೆ. ಕಳಪೆ ಯಂತ್ರೋಪಕರಣಗಳ ಅಳವಡಿಸಿರುವ ಬಗ್ಗೆ ದೂರಿನಲ್ಲಿ ಉಲ್ಲೇಖ ಮಾಡಿ ಕಲಂ 420,405,415,420ರಡಿ ದೂರು ದಾಖಲು ಆಗಿದೆ.