ವಿಜಯಪುರ: ಬೈಕ್ ಹಾಗೂ ಕಾರ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿರುವ ಪರಿಣಾಮ ಬೈಕ್ ಸವಾರ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ರೋಣಿಹಾಳ ಕ್ರಾಸ್ ಬಳಿ ನಡೆದಿದೆ.
ಬಬಲೇಶ್ವರ ಪಟ್ಟಣದ ಲಿಂಗದಳ್ಳಿ ನಿವಾಸಿ ಮಳೆಪ್ಪ ಬಸಪ್ಪ ದ್ಯಾವಾಪುರ ಮೃತಪಟ್ಟಿರುವ ಬೈಕ್ ಸವಾರ. ಇನ್ನು ಅಪಘಾತಕ್ಕೆ ಬೈಕ್ ಸವಾರನ ಅತೀ ವೇಗವೇ ಕಾರಣವಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಕೊಲ್ಹಾರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.