ವಿಜಯಪುರ: ರಾಜಕೀಯದಲ್ಲಿ ಉತ್ತಮ ವ್ಯಕ್ತಿಗೆ ಗೆಲುವು ಆಗುತ್ತದೆ ಎಂದು ಬೆಂಕಿ ಬಬಲಾದಿ 2024ರ ಭವಿಷ್ಯ ನುಡಿಸಲಾಗಿದೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಸದಾಶಿವ ಮುತ್ಯಾನ ಮಠದ ಸ್ವಾಮೀಜಿ 2024ರ ಕಾಲಜ್ಞಾನ ಭವಿಷ್ಯ ನುಡಿದಿದ್ದಾರೆ. ಹೊಳೆಬಬಲಾದಿ ಮಠಾಧೀಶರು ಮತ್ತು ಕಾರ್ಣಿಕರಾದ ಶ್ರೀ ಸಿದ್ಧರಾಮಯ್ಯ ಹೊಳಿಮಠ ಭವಿಷ್ಯ ನುಡಿದಿದ್ದಾರೆ. ವ್ಯಾಪಾರಸ್ಥರಿಗೆ ಮಧ್ಯಮ ಫಲ ಇದೆ. ಇನ್ನು ಕುಲ, ಜಾತಿಗಳಲ್ಲಿ ಕಲಹ ಜಾಸ್ತಿ ಆಗುತ್ತದೆ. ಉತ್ತರಕ್ಕೆ ಬರ ಹಾಗೂ ಕೆಡ ಇದೆ. ದೊಡ್ಡ ದೊಡ್ಡ ಮಹಾನರ್ ಯೋಗ ಅಳಿಯುವುದು ಎಂದು ಬೆಂಕಿ ಭವಿಷ್ಯ ನುಡಿದರು. ಅಲ್ಲದೇ, ಅಲ್ಲಲ್ಲಿ ರಾಜಕೀಯ ಗೊಂದಲಗಳು ಉಂಟಾಗುತ್ತವೆ. ಧರ್ಮ ಧರ್ಮದ ನಡುವೆ ಕಿತ್ತಾಟ ಜಾಸ್ತಿ ಆಗುತ್ತದೆ. ಉತ್ತಮ ಅರ್ಹ ವ್ಯಕ್ತಿಯ ಮರ್ಧನ ಆಗುತ್ತದೆ. ರಾಜಕೀಯದಲ್ಲಿ ಉತ್ತಮ ವ್ಯಕ್ತಿಗೆ ಗೆಲುವು ಆಗುತ್ತದೆ.
ಗಡಿ ಕಾಯುವ ಯೋಧರಿಗೆ ನೋವು ಇದೆ. ಕಣ್ಣಿನ ಕಾಯಿಲೆಗಳು ಜಾಸ್ತಿ ಆಗುತ್ತದೆ. ಜ್ಯೇಷ್ಠ ಮಾಸದಲ್ಲಿ ಲಿಂಗ, ಸಮಾನತೆ ಎಲ್ಲರೂ ಒಂದೇ ಎನ್ನುವ ಕಾಲ ಬರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.