ವಿಜಯಪುರ: ಲೋಕಸಭಾ ಚುನಾವಣೆ ಹಿನ್ನೆಲೆ ಹೈದ್ರಾಬಾದ್ದಿಂದ ಹುಬ್ಬಳ್ಳಿಗೆ ಟೋಯೊಟಾ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ನಗದು ಜಪ್ತಿಗೈದಿರುವ ಘಟನೆ ವಿಜಯಪುರ ನಗರದ ಸಿಂದಗಿ ಬೈಪಾಸ್ ಬಳಿ ಸೋಮವಾರ ರಾತ್ರಿ 11:45 ಗಂಟೆಗೆ ನಡೆದಿದೆ.
ಬಾಲಾಜಿ ನಿಕ್ಕಂ, ಸಚಿನ ಮೋಯಿತೆ ಬಂಧಿತ ಆರೋಪಿಗಳು. ಬಂಧಿತರಿಂದ 2ಕೋಟಿ 93 ಲಕ್ಷದ 50 ಸಾವಿರ ನಗದು, ಟೋಯೋಟಾ ಕಾರು, ಎರಡು ಮೊಬೈಲ್ ಜಪ್ತಿಗೈದಿದ್ದಾರೆ. ಈ ಕುರಿತು ಗೋಳಗುಮ್ಮಟ್ ಪೊಲೀಸ ಠಾಣೆಯಲ್ಲಿ ಕೇಸ್ ದಾಖಲಾಗಿದೆ.