ವಿಜಯಪುರ: ಆರ್ ಟಿ ಓ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ರೇಡ್ ಪ್ರಕರಣದಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ, ಬೆಳ್ಳಿ, ವಿದೇಶಿ ಕರೆನ್ಸಿ ಪತ್ತೆ ಆಗಿವೆ.
ಜಮಖಂಡಿಯಲ್ಲಿ ಆರ್ ಟಿ ಓ ಅಧಿಕಾರಿ ಷಣ್ಮುಗಪ್ಪ ನಿವಾಸದ ಮೇಲೆ ಲೋಕಾಯುಕ್ತ ರೇಡ್ ನಡೆದಿತ್ತು. ರೇಡ್ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ, ನಗದು, ವಿದೇಶಿ ಕರೆನ್ಸಿಗಳಾದ ಅಮೆರಿಕನ್ ಡಾಲರ್, ಪೌಂಡ್, ನೇಪಾಳ, ಮಲೇಶಿಯಾ ಸೇರಿ ಹಲವು ದೇಶಗಳ ಕರೆನ್ಸಿ ಪತ್ತೆ ಆಗಿವೆ. ಅಲ್ಲದೇ, ಚಿನ್ನದ ನೆಕ್ಲೆಸ್, ಚಿನ್ನದ ಸರ, ಓಲೆ, ಬೆಳ್ಳಿಯ ಪಾತ್ರೆ ಸೇರಿದಂತೆ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆ ಆಗಿದ್ದಾವೆ.
ವಿಜಯಪುರದಲ್ಲಿ ಲೋಕಾ ದಾಳಿ | ಚಿನ್ನ, ಅಮೆರಿಕ ಡಾಲರ್ ಪತ್ತೆ
![](https://karnataka1news.com/wp-content/uploads/2024/03/IMG-20240327-WA0153-860x377.jpg)