ವಿಜಯಪುರ: ಯುಗಾದಿ ಹಬ್ಬ ಆಚರಣೆ ಹಿನ್ನೆಲೆ ಸನಾತನ ಹಿಂದೂ ಧರ್ಮದ ಹೊಸ ವರ್ಷದ ಶುಭ ಸಂದರ್. ನಾವು ಸಿದ್ಧೇಶ್ವರ ದೇವಸ್ಥಾನದಲ್ಲಿ ಗೋ ಪೂಜೆ, ಗಂಗಾ ಪೂಜೆ, ಶಿವಪಾರ್ವತಿ ಹೋಮ ಮಾಡಿದ್ದೇವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ವಿಜಯಪುರ ನಗರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು,
ನಾಡಿನ ಜನತೆ, ದೇಶದ ಜನತೆಗೆ ಸುಖ ಸಂಪತ್ತು ನೀಡಲಿ ಎಂದು ಈ ಪೂಜೆ ಮಾಡಿದ್ದೇವೆ. ಪ್ರಕೃತಿಯಲ್ಲಿ ಬದಲಾವಣೆ ಆಗುತ್ತದೆಯೋ ಅದು ಹೊಸ ವರ್ಷ ಆಚರಣೆ ಆಗುತ್ತದೆ.
ಬರುವ ವರ್ಷ ಮಳೆ ಬೆಳೆ ಚೆನ್ನಾಗಿ ಬರಲಿ. ವಿಶೇಷವಾಗಿ ವಿಜಯಪುರ ಜಿಲ್ಲೆಯ ಜನರು ಸುಖ ಶಾಂತಿ ನೆಮ್ಮದಿಯಿಂದ ಇರಲು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇವೆ ಎಂದರು. ಇನ್ನು ಭಾರತದ ಗಡಿ ವಿಸ್ತರಣೆ ಆಗಬೇಕು. ದೇಶದ ಹೆಸರು ಇನ್ನು ಎತ್ತರ ಮಟ್ಟಕ್ಕೆ ಬೆಳಿಯಬೇಕು. ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಬೇಕು ಎಂದು ಹೋಮ ಮಾಡಲಾಗಿದೆ. ಪ್ರಹ್ಲಾದ ಜೋಷಿ ವಿರುದ್ಧ ದಿಂಗಾಲೇಶ್ವರ ಸ್ಪರ್ಧೆ ವಿಚಾರ, ಯಾರು ಏನು ಹೇಳಿದರು ಒಂದು ಮಾತು ಮಾತ್ರ ಸ್ಪಷ್ಟವಾಗಿದೆ. ಈ ದೇಶದ ಜನ ನರೇಂದ್ರ ಮೋದಿಯವರನ್ನು ಒಪ್ಪಿಕೊಂಡಿದ್ದಾರೆ. ಭಾರತ ಉಳಿಬೇಕು. ಹಿಂದೂ ಸನಾತನ ಧರ್ಮ ಉಳಿಬೇಕು. ಭಾರತ ಜಗತ್ತಿನ ವಿಶ್ವಗುರು ಆಗಬೇಕು ಎಂದರೆ ಮೋದಿಯವರನ್ನು ಬಿಟ್ಟರೆ ಯಾರೂ ಇಲ್ಲ.
ಯಾರಬೇಕಾದವರು ನಿಂದರಲಿ ಅದು ಏನು ಆಗುವುದಿಲ್ಲ.
ಯಾರು ನಿಲ್ಲಿಸುತ್ತಿದ್ದಾರೆ. ಯಾರು ಆಟ ಆಡ್ತಿದ್ದಾರೆ ಎಲ್ಲಾ ಗೊತ್ತಿದೆ. ಇವತ್ತು ಹೊಸ ವರ್ಷ ಇದೆ. ರಾಜಕಾರಣದ ಬಗ್ಗೆ ಜಾಸ್ತಿ ಮಾತನಾಡಲ್ಲ. ಒಟ್ಟಾರೆ ನಮಗೆ ಬೇಕಾಗಿರೋದು ದೇಶದ ಸುರಕ್ಷತೆ. ನಮ್ಮ ದೇಶದ ಜನರು ಶಾಂತಿಯಿಂದ ನೆಮ್ಮದಿಯಿಂದ, ಭಯೋತ್ಪಾದನೆಯಿಂದ ಮುಕ್ತವಾಗಿ ದೇಶ ವಿರೋದಿ ಚಟುವಟಿಕೆಗಳನ್ನು ಮಾಡುವವರಿಂದ ಮುಕ್ತರಾಗಿ ನವ ಭಾರತ ನಿರ್ಮಾಣ ಮಾಡುವ ಮೋದಿಯವರು ನನಗಲ್ಲ ದೇಶದ ಜನರಿಗೆ ಬೇಕಾಗಿದೆ. ಈ ಚುನಾವಣೆ ದೇಶಕ್ಕೆ ಮೋದಿ ಪ್ರಧಾನಿ ಮಾಡುವ ಚುನಾವಣೆ ಅಲ್ಲ, ಲೋಕಸದಸ್ಯನನ್ನು ಆಯ್ಕೆ ಮಾಡುವ ಚುನಾವಣೆ ಅಲ್ಲ. ನನ್ನ ದೇಶ, ನನ್ನ ಮನೆ ಸುರಕ್ಷಿತವಾಗಿರಬೇಕು.
ರಾತ್ರಿ 12 ಗಂಟೆಗೆ ನಮ್ಮ ಮನೆಯ ಹೆಣ್ಣು ಮಗಳು ಪೂರ್ಣಪ್ರಮಾಣದ ಬಂಗಾರ ಹಾಕಿಕೊಂಡು ಓಡಾಡಿದರು ಯಾವುದೇ ಕೃತ್ಯವಾಗಬಾರದು. ಅದೇ ರಾಮ ರಾಜ್ಯ, ಈ ರಾಮ ರಾಜ್ಯ ಮಾಡಲು ಅದು ಮೋದಿ ಅವರಿಂದ ಮಾತ್ರ ಸಾಧ್ಯ. ಈಗಾಗಲೇ ಕಳೆದ 10 ವರ್ಷದಲ್ಲಿ ತೋರಿಸಿ ಕೊಟ್ಟಿದ್ದಾರೆ. ಮುಂದೆ ಸಹ ಐದು ವರ್ಷ ಭಾರತದ ಭವಿಷ್ಯ ಒಳೆಯದಾಗುತ್ತದೆ. ರಾಜ್ಯದ 28 ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಗೆಲ್ಲಲಿದೆ ಎಂದರು.