ವಿಜಯಪುರ: ಅನೈತಿಕ ಸಂಬಂಧ ಹಿನ್ನಲೆ ಹೆಂಡತಿಯನ್ನು ಬರ್ಬರವಾಗಿ ಪಾಪಿ ಗಂಡನೋರ್ವ ಹತ್ಯೆಗೈದಿರುವ ಘಟನೆ
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಕಂಬಾಗಿ ಗ್ರಾಮದಲ್ಲಿ ನಡೆದಿದೆ. ಸಾಬು ಗಳವೆ ಹತ್ಯೆಗೈದಿರುವ ಆರೋಪಿ. ಯಲ್ಲವ್ವ ಗಳವೆ ಸಾವನ್ನಪ್ಪಿರುವ ಹೆಂಡತಿ. ಇನ್ನು ಈ ಇಬ್ಬರ ಜಗಳ ಬಿಡಿಸಲು ಬಂದಿದ್ದ ಅತ್ತೆ ಸೌರವ್ವ ಮೇಲೂ ಸಾಬು ಹಲ್ಲೆಗೈದಿದ್ದಾನೆ. ಅತ್ತೆ ಸೌರವ್ವ ಜಿಲ್ಲಾಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾಳೆ. ಬಬಲೇಶ್ವರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.