ವಿಜಯಪುರ: ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಕೃಷ್ಣಾ ನದಿಯ ಹಳೆ ಚಿಮ್ಮಲಗಿ ಬಾವಾಸಾಬ ಗುಡ್ಡದ ಬಳಿ ಮೀನುಗಾರ ಮಾಸೂಬಾ ಕಟ್ಟಿಮನಿ ಎಂಬುವರಿಗೆ 35 ಕೆ.ಜಿ ತೂಕದ ಕಟ್ಲಾ ಜಾತಿಯ ಬೃಹತ್ ಗಾತ್ರದ ಮೀನು ಬಲೆಗೆ ಸಿಕ್ಕಿದೆ. ಕೃಷ್ಣಾ ಹಿನ್ನೀರು ಕಡಿಮೆಯಾಗಿದೆ. ಅಲ್ಲದೇ, ಕಳೆದ ವರ್ಷ 30 ಕೆಜಿಯ ಮೀನು ಸಿಕ್ಕಿತ್ತು. ಇದೀಗ್ ಕಟ್ಲಾ ಮೀನಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ಅದಕ್ಕೆ 14 ಬಟ್ಟು ಅಗಲದ ಕಟ್ಲಾ ಮೀನು ಬೀಳುವ ಬಲೆ ಹಾಕಿದ್ದೆವು. ಬಲೆ ಹಾಕಲು ಕುಮಾರ ಸಾಳೆ ಸಹಕರಿಸಿದರು. ಮೀನನ್ನು ಕೆ.ಜಿಗೆ 170 ಸಗಟು ದರದಲ್ಲಿ 6 ಸಾವಿರಕ್ಕೆ ಮಾರಾಟ ಮಾಡಿದ್ದಾರೆ.