ವಿಜಯಪುರ: ವೈದ್ಯರ ನಿರ್ಲಕ್ಷ್ಯದಿಂದ ಎಮ್ಮೆ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ನಡೆದಿದೆ. ಅಬ್ದುಲ್ಅಜೀಜ್ ಯಲಗಾರ ಎಂಬುವರ ಎಮ್ಮೆ ಮೃತಪಟ್ಟಿದೆ. ಇನ್ನು ಎಮ್ಮೆಗೆ ಜ್ವರ ಬಂದಿರುವ ವೇಳೆ ಪಶು ವೈದ್ಯರು ಚಿಕಿತ್ಸೆ ನೀಡಲು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಮೃತಪಟ್ಟಿದೆ. ಅದಕ್ಕಾಗಿ ದೇವರಹಿಪ್ಪರಗಿ ಪಟ್ಟಣದ ಉಪ ನಿರ್ದೇಶಕರು ಪಶು ಪಾಲನೆ ಹಾಗೂ ಪಶು ವೈದ್ಯಾಧಿಕಾರಿ ಸೇವೆಗಳ ಅಧಿಕಾರಿಗೆ ರಾಜ್ಯ ರೈತ ಸಂಘದಿಂದ ಮನವಿ ಸಲ್ಲಿಸಿ, ಮೃತಪಟ್ಟಿರುವ ಎಮ್ಮೆಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.