ವಿಜಯಪುರ: ಪ್ರಜ್ವಲ ರೇವಣ್ಣ ಪೆನ್ಡ್ರೈವ್ ಕೇಸ್ನಲ್ಲಿ ಎಸ್ಐಟಿಯಿಂದ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಎಲ್ಲವೂ ಬರುತ್ತದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು. ವಿಜಯಪುರ ನಗರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು, ಸುಮ್ಮನೇ ಊಹೆ ಮಾಡಿ ಹೇಳೋದು ಅಲ್ಲ. ಕುಂಬಳಕಾಯಿ ಕಳ್ಳ ಅಂದ್ರೆ ಬಿಜೆಪಿ ಹೆಗಲು ಮುಟ್ಟಿ ನೋಡಿಕೊಳ್ತಿದೆ ಎಂದು ಕಿಡಿಕಾರಿದರು. ತಪ್ಪು ಮಾಡಿದವನಿಗೆ ಶಿಕ್ಷೆ ಆಗಲಿ ಎನ್ನುವ ನೈತಿಕತೆ ಮಾತು ಪ್ರಧಾನಿಗಳಿಂದ ಬಂದಿಲ್ಲ ಎಂದರು. ಇನ್ನು ಪ್ರಜ್ವಲ್ ರೇವಣ್ಣ ಕೇಸ್ ಇಂಟರ್ನ್ಯಾಷನಲ್ ಸುದ್ದಿಯಾಗಿದೆ. ಹಿಂದೆ ಒಬ್ಬ ಗಾಲ್ಫ ಕ್ರೀಡಾಪಟು ಇದ್ದ, ಪ್ರಜ್ವಲ್ ಅವನನ್ನು ಮೀರಿಸಿದ್ದಾರೆ. ಗಾಲ್ಪ್ ಆಟಗಾರನಿದ್ದ, 42-43 ಕೇಸ್ ಮಾಡಿದ್ದ. ಇವ್ರ ಕೇಸ್ ಅದನ್ನೂ ಮೀರಿಸಿವೆ. ಪ್ರಜ್ವಲ್ನ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಗೊತ್ತಿದ್ದರೇ ಮೊದಲೇ ಹಿಡಿದುಕೊಂಡು ಕೂರ್ತಿತ್ತು. ಕಾಂಗ್ರೆಸ್ ಸರ್ಕಾರದ ಕಯ್ಯಲ್ಲಿ ವಿಮಾನ ನಿಲ್ದಾಣ ಇರೋದಿಲ್ಲ. ನೈತಿಕತೆ ಇದ್ದರೇ 24 ಗಂಟೆಯಲ್ಲಿ ಪ್ರಜ್ವಲ್ನನ್ನ ತರ್ಬೋಹುದಲ್ಲ..?
ಪಾಕಿಸ್ತಾನ್ ಗುಸ್ ಕೋ ಮಾರೆಂಗೆ ಅನ್ತಾರೆ, ಆರ್ಡಿನರಿ ಮನುಷ್ಯನ್ನ ಹಿಡಿಯೋಕೆ ಆಗಲ್ವಾ..?? ಎಂದು ಕೇಂದ್ರ ಸರ್ಕಾರದ ವಿರುದ್ಧ ಸಚಿವ ಶಿವಾನಂದ ಪಾಟೀಲ್ ಪ್ರಶ್ನಿಸಿದರು.