ಬಾಗಲಕೋಟ: 2023-24ನೇ ಸಾಲಿನ SSLC ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಬಾಗಲಕೋಟೆಯ ಅಂಕಿತಾ ಬಸಪ್ಪ ಕೊನ್ನೂರು ಅವರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 625ಕ್ಕೆ 625 ಅಂಕ ಪಡೆದ ಅಂಕಿತಾಗೆ ಎಲ್ಲೆಗೆ ಪ್ರಶಂಸೆಯ ಸುರಿಮಳೆ ಹರಿದುಬರುತ್ತಿದ್ದು, ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿನಿಯಾಗಿದ್ದಾಳೆ. ಇನ್ನು ಬಾಗಲಕೋಟ ಜಿಲ್ಲೆಯ ಬೀಳಗಿ ತಾಲ್ಲೂಕಿನ ಜಾನಮಟ್ಟಿ ಗ್ರಾಮಸ್ಥರು ಅಂಕಿತಾಕ್ಕೆ ಸನ್ಮಾನಿಸಿ ಗೌರವಿಸಿದರು. ಬಸವ ಜಯಂತಿ ಹಿನ್ನಲೆ ಅಂಕಿತಾಗೆ ವಿಶ್ವಗುರು ಬಸವಣ್ಣನವರ ಭಾವಚಿತ್ರ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಜಾನಮಟ್ಟಿಯ ಹಿರಿಯರಾದ ಸಂಗಣ್ಣ ಗಿರಿಯಣ್ಣನವರ, ಚನ್ನಪ್ಪ ಮುರನಾಳ, ಚಿನ್ನಪ್ಪ ಮುರನಾಳ, ರವಿ ಸುನಗದ, ಸಂತೋಷ ಗಿರಿಯಣ್ಣನವರ, ಗ್ರಾಮ ಪಂಚಾಯತಿ ಸದಸ್ಯ ಅಡಿವೆಪ್ಪ ಹಲ್ಲೂರ, ಸಂಗಯ್ಯ ಘಂಟಿ, ಗುರುಪಾದ ಕೋಟಿ ಸೇರಿದಂತೆ ಜಾನಮಟ್ಟಿ ಗ್ರಾಮಸ್ಥರು ಉಪಸ್ಥಿತರಿದ್ದರು.